ಹುಬ್ಬಳ್ಳಿ ಬೈಪಾಸ್‌ ರಿಂಗ್‌ ರೋಡ್‌ನಲ್ಲಿ ದರೋಡೆ: ಪ್ರಾಣ ಭಯದಲ್ಲಿ ಪ್ರಯಾಣಿಕರ ಸಂಚಾರ!

ಹುಬ್ಬಳ್ಳಿ-ಮಹಾನಗರದಲ್ಲಿ ವಾಹನ ದಟ್ಟಣೆ ಕಡಿಮೆಗೊಳಿಸಲು ಸರಕು ಸಾಗಣೆ ವಾಹನಗಳು ಮತ್ತು ಇತರ ವಾಹನಗಳ ಸಂಚಾರಕ್ಕೆ ಬೈಪಾಸ್‌ ರಿಂಗ್‌ ರೋಡ ನಿರ್ಮಿಸಿದ್ದು, ಇನ್ನೂ ಉದ್ಘಾಟನೆ ಹಂತದಲ್ಲಿದೆ. ಈ ಹಂತದಲ್ಲಿ ಸಂಚರಿಸುತ್ತಿರುವ ಲಾರಿ, ಕಾರುಗಳು, ಬೈಕ್‌ ಹಾಗೂ ಇತರ ವಾಹನಗಳನ್ನು ರಿಂಗ್‌ ರೋಡ್‌ನಲ್ಲಿ ಮಾರ್ಗ ಮಧ್ಯೆ ಪುಂಡರು ಅಡ್ಡಗಟ್ಟಿ ಚಾಲಕರು, ಕ್ಲೀನರ್‌ಗಳು ಮತ್ತು ಪ್ರಯಾಣಿಕರಿಗೆ ಜೀವ ಬೆದರಿಕೆ ಹಾಕಿ ನಗ, ನಾಣ್ಯ, ಮೊಬೈಲ್‌ ದೋಚುತ್ತಿದ್ದಾರೆ.

ಹುಬ್ಬಳ್ಳಿ ಬೈಪಾಸ್‌ ರಿಂಗ್‌ ರೋಡ್‌ನಲ್ಲಿ ದರೋಡೆ: ಪ್ರಾಣ ಭಯದಲ್ಲಿ ಪ್ರಯಾಣಿಕರ ಸಂಚಾರ!
ಕಲ್ಮೇಶ ಪಟ್ಟಣದವರ ಹುಬ್ಬಳ್ಳಿ ಹುಬ್ಬಳ್ಳಿ: ವಿಜಯಪುರ ರಸ್ತೆ-ಗದಗ ರಸ್ತೆ-ಗಬ್ಬೂರ ಬೈಪಾಸ್‌ ಹಾಗೂ ಅಂಕೋಲಾ ರಸ್ತೆಧಿ ಸಂಪರ್ಕಿಸುವ ಬೈಪಾಸ್‌ ರಿಂಗ್‌ ರೋಡ್‌ನಲ್ಲಿ ಪುಂಡರು ಪ್ರಯಾಣಿಕರಿಗೆ ಬೆದರಿಕೆ ಹಾಕಿ ಹಣ, ಚಿನ್ನಾಭರಣ ವಸೂಲಿ ಮಾಡುತ್ತಿರುವ ಆಘಾತಕಾರಿ ಸಂಗತಿ ಬೆಳಕಿಗೆ ಬಂದಿದೆ. ಇದರಿಂದ ಬಹಳಷ್ಟು ಬೈಕ್‌, ಕಾರು ಪ್ರಯಾಣಿಕರು, ಲಾರಿ ಚಾಲಕರು, ಕ್ಲೀನರ್‌ಗಳು ಪ್ರಾಣ ಭಯದೊಂದಿಗೆ ಬೈಪಾಸ್‌ ರಿಂಗ್‌ ರಸ್ತೆಯಲ್ಲಿ ಸಂಚರಿಸುವ ಸ್ಥಿತಿ ನಿರ್ಮಾಣಗೊಂಡಿದೆ. ವಾಹನ ದಟ್ಟಣೆ ಕಡಿಮೆಗೊಳಿಸಲು ರಿಂಗ್‌ ರೋಡ್‌..ಹುಬ್ಬಳ್ಳಿ-ಮಹಾನಗರದಲ್ಲಿ ವಾಹನ ದಟ್ಟಣೆ ಕಡಿಮೆಗೊಳಿಸಲು ಸರಕು ಸಾಗಣೆ ವಾಹನಗಳು ಮತ್ತು ಇತರ ವಾಹನಗಳ ಸಂಚಾರಕ್ಕೆ ಬೈಪಾಸ್‌ ರಿಂಗ್‌ ರೋಡ ನಿರ್ಮಿಸಿದ್ದು, ಇನ್ನೂ ಉದ್ಘಾಟನೆ ಹಂತದಲ್ಲಿದೆ. ಈ ಹಂತದಲ್ಲಿ ಸಂಚರಿಸುತ್ತಿರುವ ಲಾರಿ, ಕಾರುಗಳು, ಬೈಕ್‌ ಹಾಗೂ ಇತರ ವಾಹನಗಳನ್ನು ರಿಂಗ್‌ ರೋಡ್‌ನಲ್ಲಿ ಮಾರ್ಗ ಮಧ್ಯೆ ಪುಂಡರು ಅಡ್ಡಗಟ್ಟಿ ಚಾಲಕರು, ಕ್ಲೀನರ್‌ಗಳು ಮತ್ತು ಪ್ರಯಾಣಿಕರಿಗೆ ಜೀವ ಬೆದರಿಕೆ ಹಾಕಿ ನಗ, ನಾಣ್ಯ, ಮೊಬೈಲ್‌ ದೋಚುತ್ತಿದ್ದಾರೆ ಎಂದು ಹೆಸರು ಹೇಳಲಿಚ್ಛಿಸದ ಕಾರು ಚಾಲಕರೊಬ್ಬರು ಹೇಳುತ್ತಾರೆ. ಹುಬ್ಬಳ್ಳಿಯ ದೊಡ್ಡ ತಂಡವೇ ಇದರಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಹಲವರು ಹೇಳಿಕೊಂಡಿದ್ದಾರೆ. ಒಂದು ವೇಳೆ ಹಣ ನೀಡಲು ನಿರಾಕರಣೆ ಮಾಡಿದರೆ ಹಲ್ಲೆ ನಡೆಸಿ ಒತ್ತಾಯ ಪೂರ್ವಕವಾಗಿ ಹಣ, ಮೊಬೈಲ್‌, ಚಿನ್ನವನ್ನು ಕಿತ್ತುಕೊಂಡ ಅನೇಕ ಘಟನೆಗಳು ನಡೆದಿವೆ. ದೂರು ನೀಡಲು ಮುಂದಾಗದ ಪ್ರಯಾಣಿಕರು.. ಹೊರ ಜಿಲ್ಲೆ ಹಾಗೂ ಹೊರ ರಾಜ್ಯಗಳ ವಾಹನಗಳು ಹೆಚ್ಚಾಗಿ ಈ ರಸ್ತೆಯಲ್ಲಿ ಸಂಚರಿಸುತ್ತಿವೆ. ಹಣ ದೋಚಿಕೊಂಡು ಹೋದರೂ ಪ್ರಕರಣ ದಾಖಲಿಸಲು ಮುಂದಾಗುತ್ತಿಲ್ಲ. ಈ ಬಗ್ಗೆ ದೂರು ನೀಡಿದರೆ ಕೋರ್ಟು, ಕಚೇರಿ ಸೇರಿದಂತೆ ಪೊಲೀಸರ ಅನಗತ್ಯ ಕಿರಿಕಿರಿ ಅನುಭವಿಸಬೇಕಾಗುತ್ತದೆ ಎಂಬ ಕಾರಣದಿಂದ ದೂರು ನೀಡಲು ಮುಂದಾಗುತ್ತಿಲ್ಲ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಪುಂಡರು ನಿತ್ಯವೂ ಒಂದಿಲ್ಲೊಂದು ವಾಹನ ತಡೆದು ಹಣ ದೋಚುತ್ತಿದ್ದಾರೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ. ಚಾಲಕರಿಗೆ ಎಚ್ಚರಿಕೆ..ಇಲ್ಲಿ ಒಂದಿಲ್ಲೊಂದು ಪ್ರಕರಣ ನಡೆಯುತ್ತಲೇ ಇದೆ. ಗಬ್ಬೂರ, ಕುಸುಗಲ್‌ ಗ್ರಾಮಸ್ಥರು ಆಗಾಗ ರಾತ್ರಿ ಈ ರಸ್ತೆಯಲ್ಲಿ ಓಡಾಡಬೇಡಿ ಎಂದು ಚಾಲಕರಿಗೆ ಎಚ್ಚರಿಕೆ ನೀಡುತ್ತಲೇ ಇರುತ್ತಾರೆ. ಈ ಬಗ್ಗೆ ಮಾಹಿತಿ ಇರದೇ ಈ ರಸ್ತೆಯಲ್ಲಿ ಸಂಚರಿಸಿದ ಅನೇಕರು ಫಜೀತಿ ಅನುಭವಿಸಿದ್ದಾರೆ. ಈ ಬಗ್ಗೆ ದೂರುಗಳು ದಾಖಲಾಗದ ಕಾರಣದಿಂದ ಈ ರಸ್ತೆಯಲ್ಲಿ ಪೊಲೀಸ್‌ ಪೆಟ್ರೊಲಿಂಗ್‌ ಸೂಕ್ತವಾಗಿ ನಡೆಯುತ್ತಿಲ್ಲ ಎಂಬುದು ಅಷ್ಟೇ ವಾಸ್ತವ ಸಂಗತಿ. ಕೈಯಲ್ಲಿ ಮಾರಕಾಸ್ತ್ರ.. ನಾಲ್ಕೈದು ಜನರ ತಂಡದಿಂದ ಈ ಕೃತ್ಯ ನಡೆಯುತ್ತಿದ್ದು, ಕೈಯಲ್ಲಿ ಮಾರಕಾಸ್ತ್ರ ಹಿಡಿದು ಚಾಲಕರ ಮತ್ತು ಪ್ರಯಾಣಿಕರನ್ನು ಹೆದರಿಸಿ ಹಣ ದೋಚುತ್ತಿದ್ದಾರೆ. ವಾಹನ ಕೆಟ್ಟು ನಿಂತಂತೆ ನಟಿಸುವ ಖದೀಮರು ಯಾರಾದರೂ ಕಾರು, ಬೈಕ್‌ ಅಥವಾ ಲಾರಿ ಚಾಲಕರು ಸಹಾಯಕ್ಕೆ ಬರುತ್ತಿದ್ದಂತೆ ಕೈಯಲ್ಲಿ ಮಾರಕಾಸ್ತ್ರ ಹಿಡಿದು ಅವರನ್ನು ಗದರಿಸಿ ಅವರ ಬಳಿಯಿದ್ದ ಮೊಬೈಲ್‌, ಹಣ ದೋಚಿಕೊಂಡು ಪರಾರಿಯಾಗುತ್ತಾರೆ ಎನ್ನುತ್ತಾರೆ ಹೆಸರು ಹೇಳಬಯಸದ ಕಾರು ಚಾಲಕರೊಬ್ಬರು. ಲಾರಿ ಚಾಲಕರೇ ಟಾರ್ಗೆಟ್‌ ರಿಂಗ್‌ ರೋಡ್‌ನಲ್ಲಿ ಹಣ ದೋಚುವ ಖದೀಮರು ಲಾರಿ ಚಾಲಕರನ್ನು ಟಾರ್ಗೆಟ್‌ ಮಾಡಿ ಹಣ ದೋಚುತ್ತಿದ್ದಾರೆ. ಲಾರಿ ಚಾಲಕರು ವೇಳೆಗೆ ಸರಿಯಾಗಿ ಸರಕು ಸಾಗಣೆ ಮಾಡಬೇಕಿರುತ್ತದೆ. ಈ ರಸ್ತೆಯಲ್ಲಿ ಸಂಚರಿಸುವ ಲಾರಿಗಳು ಬಹುತೇಕ ಹೊರ ಜಿಲ್ಲೆಅಥವಾ ಹೊರ ರಾಜ್ಯಗಳ ಲಾರಿಗಳಾಗಿರುತ್ತವೆ. ದೂರು ಕೊಡುವ ಗೋಜಿಗೆ ಹೋಗುವುದಿಲ್ಲಎಂಬ ಕಾರಣಕ್ಕೆ ಈ ರಸ್ತೆಯಲ್ಲಿ ಹೆಚ್ಚಾಗಿ ಲಾರಿಗಳನ್ನು ಅಡ್ಡಗಟ್ಟಿ ಚಾಲಕ ಮತ್ತು ಅವರ ಬಳಿಯ ಮೊಬೈಲ್‌, ಹಣ ದೋಚುತ್ತಾರೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ. ಉದ್ಘಾಟನೆಯೇ ಆಗಿಲ್ಲನಗರದಲ್ಲಿರುವ ಸಂಚಾರ ದಟ್ಟಣೆ ಕಡಿಮೆಗೊಳಿಸಲು ಮತ್ತು ಭಾರೀ ವಾಹನಗಳು ನಗರ ಪ್ರವೇಶಿಸದಂತೆ ಕ್ರಮವಹಿಸಲು ಈ ರಸ್ತೆಯಲ್ಲಿ ರಿಂಗ್‌ ರೋಡ್‌ ನಿರ್ಮಿಸಲಾಗಿದೆ. ರಿಂಗ್‌ ರೋಡ್‌ ಆಧಾರಿತ ಉದ್ಘಾಟನೆಗೊಂಡಿಲ್ಲ. ಈಗಾಗಲೇ ವಾಹನಗಳ ರಸ್ತೆ ನಿರ್ಮಾಣ ಬಹುತೇಕ ಪೂರ್ಣಗೊಂಡ ಹಿನ್ನೆಲೆಯಲ್ಲಿ ವಾಹನಗಳ ಓಡಾಟ ಶುರುವಾಗಿದೆ. ಕಳೆದ ಎರಡು ತಿಂಗಳಿಂದ ಈ ರಸ್ತೆಯಲ್ಲಿ ಹಣ ದೋಚಿರುವ ಪ್ರಕರಣಗಳು ದಾಖಲಾಗಿಲ್ಲ. ಈ ರೀತಿಯ ಪ್ರಕರಣಗಳು ನಡೆದಾಗ ಚಾಲಕರು ಮತ್ತು ಪ್ರಯಾಣಿಕರು ದೂರು ನೀಡಿದರೆ ಕ್ರಮ ಜರುಗಿಸಲು ಅನುಕೂಲವಾಗುತ್ತದೆ. ಲಾಬೂರಾಮ್‌, ಪೊಲೀಸ್‌ ಆಯುಕ್ತರು