ವಿಶ್ವಸಂಸ್ಥೆ ಭದ್ರತಾ ಮಂಡಳಿ ಸದಸ್ಯತ್ವಕ್ಕೆ ಭಾರತದ ಉಮೇದುವಾರಿಕೆ ಘೋಷಣೆ

ವಿಶ್ವಸಂಸ್ಥೆ ಭದ್ರತಾ ಮಂಡಳಿ ಸದಸ್ಯತ್ವಕ್ಕೆ ಭಾರತದ ಉಮೇದುವಾರಿಕೆ ಘೋಷಣೆ

ಭಾರತ ವಿಶ್ವಸಂಸ್ಥೆಯ ಭದ್ರತಾ ಮಂಡಳಿಗೆ ಮರಳಲು ಎದುರು ನೋಡುತ್ತಿದೆ ಎಂದಿರುವ ವಿದೇಶಾಂಗ ಸಚಿವ ಎಸ್. ಜೈಶಂಕರ್, 2028-29ರ ಅವಧಿಗೆ ಭದ್ರತಾ ಮಂಡಳಿಗೆ ತಾತ್ಕಾಲಿಕ ಸದಸ್ಯತ್ವಕ್ಕೆ ದೇಶದ ಉಮೇದುವಾರಿಕೆಯನ್ನು ಘೋಷಿಸಿದ್ದಾರೆ. ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಭಯೋತ್ಪಾದನಾ ನಿಗ್ರಹ ಕುರಿತಾದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಬಳಿಕ ಜೈಶಂಕರ್, ಸುದ್ದಿಗಾರರಿಗೆ ಈ ಮಾಹಿತಿ ತಿಳಿಸಿದರು. ಡಿಸೆಂಬರ್ ಭಾರತದ ಪ್ರಸ್ತುತ ಭದ್ರತಾ ಮಂಡಳಿಯ ಸದಸ್ಯತ್ವದ ಕೊನೆಯ ತಿಂಗಳಾಗಿದೆ.