ಕಂಪನಿ ಪಾಲುದಾರನಿಗೇ ವಂಚಿಸಿ 27 ಲಕ್ಷ ರೂ ಪಡೆದು ಎಸ್ಕೇಪ್ | Hubli |

ಹೌದು. ಉತ್ತರ ಕನ್ನಡ ಜಿಲ್ಲೆ ಭಟ್ಕಳ ತಾಲೂಕಿನ ಭದ್ರೆಯ ಕಾಲನಿ ಮೂಲದ ಬೆಂಗಳೂರು ನಿವಾಸಿ ಮಹ್ಮದ ರಿಜ್ವಾನ್ ಆಶ್ರಫ್ ಬಂಧಿತ ಆರೋಪಿಯಾಗಿದ್ದು, ಮಹ್ಮದ ಅನ್ಸಾರ ಎಂಬುವರು ಸಹೋದರ ಮಹ್ಮದ ಜುಬೇರ, ಮಹ್ಮದ ಇಸ್ಮಾಯಿಲ್ ಹಾಗೂ ಮಹ್ಮದ ರಿಜ್ವಾನ್ ಜತೆ ಸೇರಿ ಬೆಂಗಳೂರಿನ ಬೊಮ್ಮನಹಳ್ಳಿಯಲ್ಲಿ ಟಾವರ್ ಸ್ಟಾರ್ ಕಾಂಕ್ಯಾಕ್ಟಿಂಗ್ ಟ್ರೇಡಿಂಗ್ ಆ್ಯಂಡ್ ಮ್ಯಾನುಫ್ಯಾಕ್ಟರಿಂಗ್ ಎಂಬ ಕಂಪನಿ ಹೆಸರಲ್ಲಿ ಅಡುಗೆ ಎಣ್ಣೆ ಟ್ರೇಡಿಂಗ್ ಕಂಪನಿ ಆರಂಭಿಸಿದ್ದರು, ಗ್ರಾಹಕರೊಬ್ಬರಿಗೆ ಅಡುಗೆ ಎಣ್ಣೆ ಪೂರೈಸಲೆಂದು ಹುಬ್ಬಳ್ಳಿಯ ಚನ್ನಬಸವೇಶ್ವರ ಆಯಿಲ್ ಮಿಲ್ ಜತೆ ಮಾತುಕತೆ ನಡೆಸಿ. 27 ಲಕ್ಷ ರೂ.ಪಾವತಿಸಿದ್ದರು 30 ಟನ್ ಎಣ್ಣೆಯನ್ನು ಉಡುಪಿಯ ಗ್ರಾಹಕರಿಗೆ ತಲುಪಿಸುವಂತೆ ಪಾಲುದಾರರಾದ ಮಹ್ಮದ ರಿಜ್ವಾನ ಹಾಗೂ ಮಹ್ಮದ ಇಸ್ಮಾಯಿಲ್ಗೆ ತಿಳಿಸಿದ್ದರು, ಆದರೆ ಅವರು ಉಡುಪಿಯ ಗ್ರಾಹಕರಿಗೆ ತಲುಪಿಸದೆ ಪರಾರಿಯಾಗಿದ್ದರು, ಈ ಕುರಿತು ಗೋಕುಲ ರೋಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು . ಇನ್ ಸ್ಪೆಕ್ಟರ್ ಜೆ.ಎಂ. ಕಾಲಿಮಿರ್ಚಿ ನೇತೃತ್ವದ ತಂಡ ಆರೋಪಿಯನ್ನು ಬೆಂಗಳೂರಿನಲ್ಲಿ ಬಂಧಿಸಿದೆ. ಸದ್ಯ ಆರೋಪಿಯನ್ನು ನ್ಯಾಯಾಲಯಕ್ಕೆ ಒಪ್ಪಿಸಲಾಗಿದೆ.