ಮೂರನೆ ಬಾರಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧಕ್ಷರಾಗಿ ಆಯ್ಕೆಯಾದ ಡಾ. ಲಿಂಗರಾಜ ಅಂಗಡಿ
ಸತತವಾಗಿ ಮೂರನೆ ಬಾರಿ ಧಾರವಾಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧಕ್ಷರಾಗಿ ಆಯ್ಕೆಯಾದ ಡಾ. ಲಿಂಗರಾಜ ಅಂಗಡಿ ತಮ್ಮ ಪ್ರಾಮಾಣಿಕತೆ, ಪಾರದಶ೯ಕತೆ ಹಾಗೂ ಹಿಂದಿನ ಅವಧಿಯ ಕೆಲಸದಿಂದಾಗಿ ಮೂರನೆ ಬಾರಿ ಆಯ್ಕೆಯಾಗಿದ್ದಾರೆ ಎಂದು ಪ್ರೊ. ಧರಣೇಂದ್ರ ಕುರಕುರಿ ಹೇಳಿದರು. ಹುಬ್ವಳ್ಳಿಯ ಅರಿಹಂತ ಮಾಕೆ೯ಟಿಂಗ್ ಸಮೂಹ ಕಾಪೊ೯ರೇಷನ್‌ನಲ್ಲಿ ನಡೆದ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಅವರು ಕತ೯ವ್ಯನಿಷ್ಠರಾದ ಡಾ. ಲಿಂಗರಾಜ ಅಂಗಡಿಯವರ ಅಧ್ಯಕ್ಷತೆಯಲ್ಲಿ ಧಾರವಾಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಈ ಅವಧಿಯಲ್ಲಿ ಅನೇಕ ಯೋಜನೆಗಳು ಸಾಕಾರಗೊಳ್ಳುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದರು. ಈ ಕಾರ್ಯಕ್ರಮದಲ್ಲಿ ಸಿ. ಜಿ. ಧಾರವಾಡಶೆಟ್ಟಿ. ಅಪ್ಪಣ್ಣ ಬೆಂಡಿಗೇರಿ, ಅಜ್ಜಪ್ಪ ಬೆಂಡಿಗೇರಿ ಅಶೋಕ್ ಕುರಕುರಿ, ಚಂದ್ರಶೇಖರ ನೂಲ್ವಿ, ಎಮು ಎಸು ವನಕಿ, ಬಿ ಎಚ್ ಪರಮೇಶ್ವರಪ್ಪ ಸೇರಿದಂತೆ ಇತರೆ ಗಣ್ಯರು ಭಾಗಿಯಾಗಿದ್ದರು.