ಮಾಜಿ ಸಚಿವ ಕಾಂಗ್ರೆಸ್ ಹಿರಿಯ ಮುಖಂಡ ಎಸ್. ಆರ್. ಮೋರೆ ನಿಧನ |Dharwad|

ಧಾರವಾಡ ಜಿಲ್ಲೆಯ ಹಿರಿಯ ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಸಚಿವ ಎಸ್. ಆರ್. ಮೋರೆ ಇಂದು ಬೆಳಗಿನ ಜಾವ 5 ಘಂಟೆಗೆ ವಿಧಿವಶರಾಗಿದ್ದಾರೆ.ಧಾರವಾಡ ಜಿಲ್ಲೆಯ ಮರಾಠಾ ಸಮಾಜದ ಹಿರಿಯ ಮುಖಂಡರು ಮಾಜಿ ಸಚಿವ ಹಾಗೂ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರಾದ ಶ್ರೀ ಎಸ್ ಆರ್ ಮೋರೆ ಅವರ ನಿಧನ ಕೈ ಕಾರ್ಯಕರ್ತರಿಗೆ ಅತೀವ ದುಃಖ ನೀಡಿದೆ. ಆಶ್ರಯ ಯೋಜನೆ ಮೂಲಕ ಸಾವಿರಾರು ಜನರಿಗೆ ಸೂರು ಒದಗಿಸಿಕೊಟ್ಟ ಮೋರೆ ಅವರ ಸಾವು ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ನಷ್ಟವಾದಂತಾಗಿದೆ.ಅವರ ಆತ್ಮಕ್ಕೆ ಚಿರಶಾಂತಿ ಕೋರುತ್ತ, ಅವರ ಕುಟುಂಬ ಹಾಗೂ ಅಪಾರ ಅಭಿಮಾನಿ ಬಳಗಕ್ಕೆ ಈ ಅಗಲಿಕೆಯನ್ನು ಭರಿಸುವ ಶಕ್ತಿಯನ್ನು ದೇವರು ನೀಡಲೆಂದು 9ಲೈವ್ ಪ್ರಾರ್ಥಿಸುತ್ತದೆ.