ಅಕ್ಟೋಬರ್ 7ರ ಶುಕ್ರವಾರದಂದು ಬೆಂಗಳೂರಿನ ಯಾವ ಮುಖ್ಯ ಚಿತ್ರಮಂದಿರದಲ್ಲಿ ಯಾವ ಚಿತ್ರ?

ಅಕ್ಟೋಬರ್ 7ರ ಶುಕ್ರವಾರದಂದು ಬೆಂಗಳೂರಿನ ಯಾವ ಮುಖ್ಯ ಚಿತ್ರಮಂದಿರದಲ್ಲಿ ಯಾವ ಚಿತ್ರ?

ಳೆದ ವಾರ ಬಿಡುಗಡೆಯಾದ ರಿಷಬ್ ಶೆಟ್ಟಿ ನಿರ್ದೇಶನದ ಹಾಗೂ ನಟನೆಯ ಕಾಂತಾರಾ ಚಿತ್ರದ ಅಬ್ಬರದ ಪರಿಣಾಮ ಈ ವಾರ ತೆರೆಕಂಡಿರುವ ಚಿತ್ರಗಳ ಹೆಸರೂ ಸಹ ಸಿನಿಪ್ರೇಕ್ಷಕರಿಗೆ ಹೆಚ್ಚಾಗಿ ತಿಳಿದಿಲ್ಲ ಎಂದರೆ ತಪ್ಪಾಗಲಾರದು. ಹೌದು, ರಾಜ್ಯಾದ್ಯಂತ ಕಾಂತರ ಜಪ ಜೋರಾಗಿದೆ, ಭೂತ ಕೋಲದ ಕೂಗು ರಾಜ್ಯದ ಗಡಿಯನ್ನು ಮೀರಿ ಉತ್ತರ ಭಾರತವನ್ನು ಕೂಡ ತಲುಪಿದೆ.

ಹೀಗೆ ಕಾಂತಾರದ ಅಬ್ಬರದ ನಡುವೆಯೂ ಇಂದು ಕೆಲವೊಂದಷ್ಟು ಚಿತ್ರಗಳು ಚಿತ್ರಮಂದಿರಕ್ಕೆ ಲಗ್ಗೆ ಇಟ್ಟಿವೆ. ಅಮಿತಾಭ್ ಬಚ್ಚನ್ ಹಾಗೂ ರಶ್ಮಿಕಾ ಮಂದಣ್ಣ ಅಭಿನಯದ ಹಿಂದಿಯ ಗುಡ್ ಬೈ, ಕನ್ನಡದ ದಿ ಚೆಕ್ ಮೇಟ್

ಇನ್ನು ಈ ವಾರ ದಸರಾ ವಾರವಾದ ಕಾರಣದಿಂದ ಶುಕ್ರವಾರದ ಬದಲಾಗಿ ಬುಧವಾರವೇ ವಿಜಯದಶಮಿ ಪ್ರಯುಕ್ತ ಹಲವು ಚಿತ್ರಗಳು ಚಿತ್ರಮಂದಿರಕ್ಕೆ ಲಗ್ಗೆ ಇಟ್ಟಿದ್ದವು. ತೆಲುಗಿನ ಮೆಗಾಸ್ಟಾರ್ ಚಿರಂಜೀವಿ ಅಭಿನಯದ ಗಾಡ್ ಫಾದರ್, ಕಿಂಗ್ ನಾಗಾರ್ಜುನ ಅಭಿನಯದ ದ ಘೋಸ್ಟ್ ಹಾಗೂ ಸ್ವಾತಿ ಮುತ್ಯಂ ಚಿತ್ರಗಳು ವಿಜಯದಶಮಿಯಂದು ಬಿಡುಗಡೆಯಾದವು. ಹೀಗೆ ಈ ವರ್ಷದ ಅಕ್ಟೋಬರ್ ಮೊದಲನೇ ವಾರ ಐದಾರು ಸಿನಿಮಾಗಳು ಬಿಡುಗಡೆಯಾಗಿದ್ದರೂ ಸಹ ಕಾಂತಾರ ಹವಾ ಚೂರೂ ಕಮ್ಮಿ ಆಗಿಲ್ಲ. ಹೀಗೆ ಅಕ್ಟೋಬರ್ ಮೊದಲನೇ ವಾರದಲ್ಲಿ ಹಲವು ಚಿತ್ರಗಳು ಬಿಡುಗಡೆಯಾದ ನಂತರ ಬೆಂಗಳೂರಿನ ಕೆಜಿ ರಸ್ತೆಯ ಪ್ರಮುಖ ಚಿತ್ರಮಂದಿರಗಳಲ್ಲಿ ಯಾವ ಚಿತ್ರಗಳು ಪ್ರದರ್ಶನವಾಗುತ್ತಿವೆ ಎಂಬುದರ ಕುರಿತಾದ ವಿವರ ಕೆಳಕಂಡಂತಿದೆ.

ಸಂತೋಷ್: ಕಾಂತಾರ 

ನರ್ತಕಿ: ದ ಘೋಸ್ಟ್ ಪ್ರದರ್ಶನ ಮತ್ತು ಪೊನ್ನಿಯಿನ್ ಸೆಲ್ವನ್  ಪ್ರದರ್ಶನ

ಭೂಮಿಕಾ: ಗಾಡ್ ಫಾದರ್

ಅನುಪಮ: ತೋತಾಪುರಿ ಚಾಪ್ಟರ್ 1

ಸಿನಿಮಾಗಳು ತೆರೆಕಂಡಿವೆ.