ದೆಹಲಿಯಲ್ಲಿ ನಿಲ್ಲದ ಶೀತಮಾರುತ; ಚಳಿ ಹೆಚ್ಚಳ

ದೆಹಲಿಯಲ್ಲಿ ನಿಲ್ಲದ ಶೀತಮಾರುತ; ಚಳಿ ಹೆಚ್ಚಳ

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಉಷ್ಣಾಂಶ ತೀವ್ರವಾಗಿ ಕುಸಿದಿದ್ದು, ಚಳಿ ಹೆಚ್ಚಾಗಿದೆ. ಹಾಗಾಗಿ, ದೆಹಲಿಯಲ್ಲಿ ವಿವಿಧೆಡೆ ತೆರಳಬೇಕಾದ & ದೆಹಲಿಯಲ್ಲಿ ಇಳಿಯಬೇಕಾದ ಹಲವು ವಿಮಾನಗಳ ಸಂಚಾರದಲ್ಲಿ ವ್ಯತ್ಯಯವಾಗಿದೆ. ದೆಹಲಿ & ಉತ್ತರ ಭಾರತದ ಹಲವು ನಗರಗಳಲ್ಲಿ ಮಂಜು ದಟ್ಟೈಸಿರುವುದರಿಂದ 150ಕ್ಕೂ ಹೆಚ್ಚು ದೇಶೀಯ ವಿಮಾನಗಳ ಸಂಚಾರ ರದ್ದಾಗಿದೆ. ಚಳಿಗಾಳಿ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಜ.15ರವರೆಗೆ ಶಾಲೆಗಳಿಗೆ ರಜೆ ಘೋಷಿಸುವಂತೆ ದೆಹಲಿ ಸರ್ಕಾರ ಸೂಚನೆ ನೀಡಿದೆ.