'ನಾನು ಚಾಮರಾಜಪೇಟೆ ಅಳಿಯ' : ಚುನಾವಣಾ ಸ್ಪರ್ಧೆಯ ಸುಳಿವು ನೀಡಿದ ಸಿದ್ದರಾಮಯ್ಯ

'ನಾನು ಚಾಮರಾಜಪೇಟೆ ಅಳಿಯ' : ಚುನಾವಣಾ ಸ್ಪರ್ಧೆಯ ಸುಳಿವು ನೀಡಿದ ಸಿದ್ದರಾಮಯ್ಯ

ಬೆಂಗಳೂರು : ವಿಧಾನಸಭಾ ಚುನಾವಣೆ ಸಮೀಪವಾಗುತ್ತಿದ್ದಂತೆ ರಾಜಕೀಯ ಪಕ್ಷದ ನಾನಾ ಕಸರತ್ತು ಆರಂಭವಾಗಿದೆ. ಇನ್ನೂ, ಮಾಜಿ ಸಿಎಂ ಸಿದ್ದರಾಮಯ್ಯ ತಾವು ಸ್ಪರ್ಧಿಸುವ ಕ್ಷೇತ್ರದ ಬಗ್ಗೆ ಮುನ್ಸೂಚನೆ ನೀಡಿದ್ದಾರೆ.

ಸುದ್ದಿಗಾರರ ಜೊತೆ ಮಾತನಾಡಿದ ಸಿದ್ದರಾಮಯ್ಯ' ಚಾಮರಾಜಪೇಟೆಯಲ್ಲಿ ಸಿದ್ದರಾಮಯ್ಯ ಸ್ಪರ್ಧಿಸಲಿ ಎಂಬ ಜಮೀರ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಸಿದ್ದರಾಮಯ್ಯ .ನಾನು ಮದ್ವೆಯಾಗಿರುವುದು ಅಲ್ಲೇ, ನಾನು ಚಾಮರಾಜಪೇಟೆ ಅಳಿಯ, ಅದಕ್ಕಾಗಿ ಅವರು ಸಲ್ಲಿಯೇ ಸ್ಪರ್ಧಿಸಲು ಹೇಳುತ್ತಿದ್ದಾರೆ, ಇದನ್ನು ಅಂತಿಮಗೊಳಿಸುವ ತೀರ್ಮಾನವನ್ನು ಹೈಕಮಾಂಡ್ ಮಾಡಲಿದೆ ಎಂದು ಹೇಳಿದರು.

ಕರ್ನಾಟಕ-ಮಹಾರಾಷ್ಟ್ರ ರಾಜ್ಯಗಳ ನಡುವೆ ಗಡಿ ವಿವಾದ ವಿಚಾರವಾಗಿ ಮಾಜಿ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ. ಗಡಿ ವಿವಾದವನ್ನು ಜೀವಂತವಾಗಿ ಇಡಲು ಮಹಾರಾಷ್ಟ್ರ ಗಡಿ ಕ್ಯಾತೆ ತೆಗೆಯುತ್ತಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.ಗಡಿ ಭಾಗದ ವಿವಾದವನ್ನು ಜೀವಂತವಾಗಿಡಲು ಮಹಾರಾಷ್ಟ್ರದವರು ಹೀಗೆ ಮಾಡ್ತಿದ್ದಾರೆ. ಗಡಿ ವಿವಾದದಲ್ಲಿ ಮಹಾಜನ್ ವರದಿಯೇ ಅಂತಿಮ. ಈಗಾಗಲೇ ವರದಿ ಬಂದಿದೆ. ಅದನ್ನು ಮಹಾರಾಷ್ಟ್ರದವರು ಒಪ್ಪಲ್ಲ ಅಂದರೆ ಹೇಗೆ? ಮಹಾಜನ್ ಮಹಾರಾಷ್ಟ್ರದವರು. ಅವರು ಕೊಟ್ಟ ವರದಿ ಒಪ್ಪಿಲ್ಲ ಅಂದ್ರೆ ಹೇಗೆ ಅಂತ ಪ್ರಶ್ನೆ ಮಾಡಿದ್ದಾರೆ.

ಮಹಾಜನ್ ವರದಿ ಒಪ್ಪಿಲ್ಲ. ಅಂದ್ರೆ ಅದು ಮಹಾರಾಷ್ಟ್ರದವರ ಪುಂಡಾಟಿಕೆ. ನಾವು ಪುಂಡಾಟಿಕೆಗೆ ಹೆದರಬಾರದು. ಸರ್ವ ಪಕ್ಷಗಳ ಸಭೆ ಕರೆಯುತ್ತೇನೆ ಅಂತ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ರು. ಆದರೆ ಇನ್ನು ಸಭೆ ಕರೆದಿಲ್ಲ ಅಂತ ಸಿಎಂ ವಿರುದ್ಧ ಸಿದ್ದರಾಮಯ್ಯ ಅಸಮಾಧಾನ ಹೊರ ಹಾಕಿ, ಸರ್ಕಾರ ಉತ್ತಮ ಲಾಯರ್ಗಳನ್ನು ಇಟ್ಟು ವಾದ ಮಾಡಬೇಕು ಅಂತ ಸಲಹೆ ಕೊಟ್ಟರು.