60 ವರ್ಷ ಕಾಂಗ್ರೆಸ್ ಆಡಳಿತ ಮಾಡಿ ಪಾಪದ ರಾಶಿ ಹಾಕಿದ್ದರು; ಈಗ ಸ್ವಚ್ಛ ಮಾಡುವ ಕೆಲಸ ಮಾಡುತ್ತಿದ್ದಾರೆ; ಗೋವಿಂದ ಕಾರಜೋಳ ವಾಗ್ದಾಳಿ

ಬೆಂಗಳೂರು: ವಿಧಾನಸಭೆ ಚುನಾವಣೆ ಹತ್ರ ಬರುತ್ತಿದೆ. ಹೀಗಾಗಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಅಧಿಕಾರದ ಚುಕ್ಕಾಣಿ ಹಿಡಿಯುವುದಕ್ಕಾಗಿ ರಾಜಕೀಯ ಪಕ್ಷಗಳ ನಡುವೆ ಆರೋಪ- ಪ್ರತ್ಯಾರೋಪಗಳು ಶುರುವಾಗಿದೆ.
ಇದೀಗ ಕಾಂಗ್ರೆಸ್ ವಿರುದ್ಧ ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ವಾಗ್ದಾಳಿ ನಡೆಸಿದ್ದಾರೆ.ಕಾಂಗ್ರೆಸ್‌ನಿಂದ 10 ಕೆ.ಜಿ ಅಕ್ಕಿ ಮತ್ತು 200 ಯುನಿಟ್ ಉಚಿತ ವಿದ್ಯುತ್ ಘೋಷಣೆ ವಿಚಾರವಾಗಿ ಸಚಿವ ಗೋವಿಂದ ಕಾರಜೋಳ ಪ್ರತಿಕ್ರಿಯೆ ನೀಡಿದ್ದಾರೆ. ಯಾವತ್ತೂ ಕೂಡ ಕಾಂಗ್ರೆಸ್‌ನವರು ಸತ್ಯ ಹೇಳಿಲ್ಲ. ಒಂದು ವೇಳೆ ಸತ್ಯ ಹೇಳಿದ್ರೂ ಅಂದ್ರೆ ಅಂದೇ ಕಾಂಗ್ರೆಸ್ ಸಾಯುತ್ತದೆ ಎಂದು ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಸ್ವಾತಂತ್ರ್ಯ ಬಂದ ಮೇಲೆ 60 ವರ್ಷ ಕಾಂಗ್ರೆಸ್ ಅವರು ಆಡಳಿತ ಮಾಡಿ ಪಾಪದ ರಾಶಿ ಹಾಕಿದರು . ಈಗ ಅದನ್ನು ಸ್ವಚ್ಛ ಮಾಡುವ ಕೆಲಸ ಮಾಡುತ್ತಿದ್ದಾರೆ. ಕಾಂಗ್ರೆಸ್ ಅವರಿಗೆ ಈಗ ಪ್ರಾಯಶ್ಚಿತ್ತ ಆಗಿದೆ. ಅದಕ್ಕೆ ಈ ಕೆಲಸ ಮಾಡುತ್ತಿದ್ದಾರೆ. ಇನ್ನು ಮುಂದೆ ಅವರಿಗೆ ಶಾಶ್ವತವಾಗಿ ಕಸ ಗುಡಿಸುವ ಕೆಲಸ ಖಾಯಂ ಆಗಿ ಇರುತ್ತದೆ ಎಂದು ಟೀಕೆ ಮಾಡಿದ್ದಾರೆ.
ಗರೀಬಿ ಹಠಾವೋ ಎಂದರು. ಆದರೆ ಗರೀಬಿ ಹಠಾವೋ ಆಯ್ತಾ? ಗರೀಬಿ ಹಠಾವೋ ಆಗಿಲ್ಲ. ಬದಲಿಗೆ ಕಾಂಗ್ರೆಸ್ ಗರೀಬಿ ಹಠಾವೋ ಆಯ್ತು ಅಷ್ಟೆ. ದಲಿತರನ್ನು 100% ವಿದ್ಯಾವಂತರಾಗಿ ಮಾಡುತ್ತೇವೆ ಎಂದರು.