ತೆರಿಗೆ ವಿಚಾರವಾಗಿ ಹೈಕೋರ್ಟ್ ಮೊರೆಹೋದ ಅನುಷ್ಕಾ ಶರ್ಮಾ

ತೆರಿಗೆ ವಿಚಾರವಾಗಿ ಹೈಕೋರ್ಟ್ ಮೊರೆಹೋದ ಅನುಷ್ಕಾ ಶರ್ಮಾ

ನಟಿ ಅನುಷ್ಕಾ ಶರ್ಮಾ ತೆರಿಗೆ ವಿಚಾರವಾಗಿ ಬಾಂಬೆ ಹೈಕೋರ್ಟ್​ನ ಮೊರೆ ಹೋಗಿದ್ದಾರೆ. 2012-13 & 2013-14ನೇ ಸಾಲಿನ ತೆರಿಗೆ ಬಾಕಿ ಪಾವತಿಸುವಂತೆ ಅನುಷ್ಕಾ ಶರ್ಮಾ ಅವರಿಗೆ ಮಾರಾಟ ತೆರಿಗೆಯ ಉಪ ಆಯುಕ್ತರು ಸೂಚಿಸಿದ್ದರು. ಇದನ್ನು ಅನುಷ್ಕಾ ಹೈಕೋರ್ಟ್​ನಲ್ಲಿ ಪ್ರಶ್ನೆ ಮಾಡಿ, ತಪ್ಪಾಗಿ ತೆರಿಗೆ ವಿಧಿಸಲಾಗಿದೆ. ಈ ಸೂಚನೆಯನ್ನು ರದ್ದು ಮಾಡುವಂತೆ ಅನುಷ್ಕಾ ಕೋರಿದ್ದಾರೆ. ಈ ಅರ್ಜಿಗೆ ಉತ್ತರಿಸುವಂತೆ ಮಾರಾಟ ತೆರಿಗೆ ಇಲಾಖೆಗೆ ಕೋರ್ಟ್​ ಸೂಚನೆ ನೀಡಿದೆ. ಈ ಕೇಸ್ ವಿಚಾರಣೆ ಫೆ.6ರಂದು ನಡೆಯಲಿದೆ.