ಪ್ಯಾರಿಸ್-ದೆಹಲಿ ವಿಮಾನದ ವರದಿ ವಿಳಂಬ ; ಏರ್ ಇಂಡಿಯಾಗೆ ₹10 ಲಕ್ಷ ದಂಡ ವಿಧಿಸಿದ '

ಪ್ಯಾರಿಸ್-ದೆಹಲಿ ವಿಮಾನದ ವರದಿ ವಿಳಂಬ ; ಏರ್ ಇಂಡಿಯಾಗೆ ₹10 ಲಕ್ಷ ದಂಡ ವಿಧಿಸಿದ '

ವದೆಹಲಿ : ಡಿಸೆಂಬರ್ 6 ರಂದು ಪ್ಯಾರಿಸ್-ದೆಹಲಿ ವಿಮಾನದಲ್ಲಿ ಪ್ರಯಾಣಿಕನೊಬ್ಬ ಖಾಲಿ ಸೀಟ್ ಮತ್ತು ಮಹಿಳಾ ಪ್ರಯಾಣಿಕರ ಕಂಬಳಿಯ ಮೇಲೆ ಮಲಗಿದ ಘಟನೆಯನ್ನ ಏರ್ ಇಂಡಿಯಾ ಡಿಜಿಸಿಎಗೆ ವರದಿ ಮಾಡಿರಲಿಲ್ಲ. ಅದಲ್ದೇ ಈ ವಿಷಯವನ್ನ ಅದರ ಆಂತರಿಕ ಸಮಿತಿಗೆ ಶಿಫಾರಸು ಮಾಡಲು ವಿಳಂಬ ಮಾಡಿದ್ದಕ್ಕಾಗಿ ಡಿಜಿಸಿಎ ಏರ್ ಇಂಡಿಯಾಗೆ 10 ಲಕ್ಷ ರೂಪಾಯಿಗಳ ದಂಡ ವಿಧಿಸಿದೆ.

ಈ ಮೂಲಕ ಮತ್ತೊಬ್ಬ ವಿಳಂಬ ವರದಿ ಮಾಡದಂತೆ ಬಿಸಿ ಮುಟ್ಟಿಸಿದೆ.ಈ ಹಿಂದೆ ಡಿಜಿಸಿಎ ಏರ್ ಇಂಡಿಯಾದ ಜವಾಬ್ದಾರಿಯುತ ವ್ಯವಸ್ಥಾಪಕರಿಗೆ ಶೋಕಾಸ್ ನೋಟಿಸ್ ನೀಡಿತ್ತು. 2022 ರ ಡಿಸೆಂಬರ್ 6 ರಂದು ಪ್ಯಾರಿಸ್-ನವದೆಹಲಿ ವಿಮಾನದಲ್ಲಿ ಪ್ರಯಾಣಿಕರ ದುರ್ವರ್ತನೆಗೆ ಸಂಬಂಧಿಸಿದ ನಿಯಂತ್ರಕ ಬಾಧ್ಯತೆಗಳನ್ನ ಉಲ್ಲಂಘಿಸಿದ್ದಕ್ಕಾಗಿ ಅವರ ವಿರುದ್ಧ ಜಾರಿ ಕ್ರಮವನ್ನ ಏಕೆ ತೆಗೆದುಕೊಳ್ಳಬಾರದು ಎಂದು ವಿಮಾನಯಾನ ನಿಯಂತ್ರಕ ನೋಟಿಸ್ನಲ್ಲಿ ಕೇಳಿತ್ತು.