ವೈದ್ಯರ ಕೈಬರಹ ಅರ್ಥೈಸಲು ಗೂಗಲ್ನಿಂದ ಹೊಸ ಆ್ಯಪ್ ಬಿಡುಗಡೆ

ವೈದ್ಯರ ಕೈಬರಹವನ್ನು ಅರ್ಥಹಿಸಲು ಗೂಗಲ್ ಹೊಸದೊಂದು ಆ್ಯಪ್ ಬಿಡುಗಡೆ ಮಾಡಿದೆ. ದೆಹಲಿಯಲ್ಲಿ ನಡೆದ ಗೂಗಲ್ ಇನ್ ಇಂಡಿಯಾ ಈವೆಂಟ್ನಲ್ಲಿ ಟೆಕ್ ದಿಗ್ಗಜ ವಿಶೇಷ ಎಐ ಘೋಷಿಸಿದ್ದು ಇದರ ಮೂಲಕ ಕೈಬರಹವನ್ನ ವೈದ್ಯರ ಪ್ರಿಸ್ಕ್ರಿಪ್ಷನ್ನಲ್ಲಿ ಡಿಕೋಡ್ ಮಾಡಬಹುದು. ಗೂಗಲ್ ಲೆನ್ಸ್ನಲ್ಲಿ ಪ್ರಾರಂಭವಾಗುವ ಈ ವೈಶಿಷ್ಟ್ಯವು ಬಳಕೆದಾರರಿಗೆ ಪ್ರಿಸ್ಕ್ರಿಪ್ಷನ್ ಚಿತ್ರವನ್ನು ತೆಗೆದುಕೊಳ್ಳಲು ಅಥವಾ ಫೋಟೋ ಲೈಬ್ರರಿಯಿಂದ ಅಪ್ಲೋಡ್ ಮಾಡಲು ಅನುವು ಮಾಡಿಕೊಡುತ್ತದೆ ಎಂದಿದ್ದಾರೆ