ಕವಿವ ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ | Dharwad |
ಧಾರವಾಡದ ಪ್ರತಿಷ್ಠಿತ ಕರ್ನಾಟಕ ವಿದ್ಯಾವರ್ಧಕ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ ಶಂಕರ ಹಲಗತ್ತಿ ಗೆಲುವು ಸಾಧಿಸಿದ್ದಾರೆ. ಪ್ರಕಾಶ ಉಡಿಕೇರಿ, ಶಂಕರ ಹಲಗತ್ತಿ ಹಾಗೂ ಮಹಾದೇವ ದೊಡಮನಿ ಅವರ ಬಣಗಳ ನಡುವೆ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ತೀವ್ರ ಪೈಪೆÇೀಟಿ ನಡೆದಿತ್ತು. ಶಂಕರ ಹಲಗತ್ತಿ ಬಣ ಚುನಾವಣೆಯಲ್ಲಿ ಗೆಲುವು ಸಾಧಿಸುವ ಮೂಲಕ ಜಯಭೇರಿ ಬಾರಿಸಿದೆ. ಆ ಮೂಲಕ ಹಲಗತ್ತಿ ಅವರು ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದಾರೆ. ಈ ಹಿಂದೆಯೂ ಡಾ.ಪಾಟೀಲ ಪುಟ್ಟಪ್ಪನವರ ಅವಧಿಯಲ್ಲಿ ಶಂಕರ ಹಲಗತ್ತಿ ಅವರು ಪ್ರಧಾನ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದರು.