ಈ ಹುಡುಗಿಯ ಬ್ಯಾಟಿಂಗ್ ಸ್ಕಿಲ್ಗೆ ಸಚಿನ್ ಫಿದಾ! BCCI ಕಾರ್ಯದರ್ಶಿ ಜಯ್ ಶಾ ಹೇಳಿದ್ದಿಷ್ಟು..

ನವದೆಹಲಿ: ಸಾಮಾಜಿಕ ಜಾಲತಾಣದಲ್ಲಿ ಪತ್ರಿನಿತ್ಯ ಸಾವಿರಾರು ವಿಡಿಯೋಗಳು ಹರಿದಾಡುತ್ತಿರುತ್ತವೆ. ಆದರೆ, ಅವುಗಳಲ್ಲಿ ಕೆಲವೊಂದು ವಿಡಿಯೋಗಳು ವಿಶೇಷ ಕಾರಣದಿಂದಾಗಿ ಜನರ ಗಮನ ಸೆಳೆದುಬಿಡುತ್ತದೆ. ಇನ್ನು ಕೆಲವೊಮ್ಮೆ ಸೆಲೆಬ್ರಿಟಿಗಳು ವಿಡಿಯೋಗೆ ಫಿದಾ ಆಗಿ, ತಮ್ಮ ಜಾಲತಾಣ ಖಾತೆಯಲ್ಲಿ ಶೇರ್ ಮಾಡಿಕೊಂಡಾಗಲು ಆ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗುತ್ತದೆ.
ಮೊನ್ನೆಯಷ್ಟೇ ಚೊಚ್ಚಲ ಮಹಿಳಾ ಪ್ರೀಮಿಯರ್ ಲೀಗ್ಗೆ ಹರಾಜು ಪ್ರಕ್ರಿಯೆ ನಡೆದಿದೆ. ಇದರ ಬೆನ್ನಲ್ಲೇ ವಿಡಿಯೋವೊಂದನ್ನು ಪೋಸ್ಟ್ ಮಾಡಿರುವ ನೆಟ್ಟಿಗರು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಮತ್ತು ರಾಜಸ್ಥಾನ ಕ್ರಿಕೆಟ್ ಅಸೊಸಿಯೇಷನ್ ಅಧ್ಯಕ್ಷ ವೈಭವ್ ಗೆಹ್ಲೋಟ್ ಅವರಿಗೆ ಟ್ಯಾಗ್ ಮಾಡಿದ್ದಾರೆ.
ಹುಡುಗಿಯೊಬ್ಬಳು ತುಂಬಾ ಪರ್ಫೆಕ್ಟ್ ಆಗಿ, ಸ್ಟಾರ್ ಕ್ರಿಕೆಟರ್ಗಳಂತೆ ಬ್ಯಾಟಿಂಗ್ ಮಾಡುತ್ತಿರುವ ದೃಶ್ಯ ವಿಡಿಯೋದಲ್ಲಿದೆ. ಹಳ್ಳಿಯ ಹುಡುಗಿಯ ವಿಡಿಯೋ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಗಮನಕ್ಕೆ ಬಂದಿದ್ದು, ತಮ್ಮ ಜಾಲತಾಣದಲ್ಲಿ ಶೇರ್ ಮಾಡಿ, ಹುಡುಗಿಯನ್ನು ಕೊಂಡಾಡಿದ್ದಾರೆ. ಮಹಿಳೆಯ ಕ್ರಿಕೆಟ್ ಭವಿಷ್ಯವು ಉತ್ತಮರ ಕೈಗಳಲ್ಲಿದೆ ಎಂದಿದ್ದಾರೆ.
ಹುಡುಗಿಯ ಕ್ರಿಕೆಟ್ ಕೌಶಲ್ಯ ಮತ್ತು ಆಟದ ಮೇಲಿನ ಆಕೆಯ ಉತ್ಸಾಹ ಕಂಡು ಆಶ್ಚರ್ಯಚಕಿತನಾದೆನು. ಮಹಿಳಾ ಕ್ರಿಕೆಟ್‌ನ ಭವಿಷ್ಯವು ಉತ್ತಮರ ಕೈಯಲ್ಲಿದೆ ಎಂದು ನೋಡಲು ನನಗೆ ಸಂತೋಷವಾಗಿದೆ. ನಮ್ಮ ಯುವ ಅಥ್ಲೀಟ್‌ಗಳನ್ನು ಸಬಲೀಕರಣಗೊಳಿಸಲು ನಾವು ಒಟ್ಟಾಗಿ ಕೆಲಸ ಮಾಡೋಣ, ಇದರಿಂದ ಅವರು ಭವಿಷ್ಯದ ಆಟವನ್ನು ಬದಲಾಯಿಸಬಹುದು ಎಂದು ಜಯ್ ಶಾ ತಿಳಿಸಿದರು.
ಹುಡುಗಿಯ ವಿಡಿಯೋ ಸಚಿನ್ ಗಮನಕ್ಕೂ ಸಹ ಬಂದಿದ್ದು, ನಿನ್ನೆಯಷ್ಟೇ ಹರಾಜು ನಡೆದಿದೆ. ಇವತ್ತು ಪಂದ್ಯವೂ ಶುರುವಾಯಿತೇ? ಏನು ವಿಷಯ? ನಿಜವಾಗಿಯೂ ನಿಮ್ಮ ಬ್ಯಾಟಿಂಗ್ ನೋಡಿ ಸಂತೋಪಟ್ಟೆ ಎಂದು ವಿಡಿಯೋ ಶೇರ್ ಮಾಡಿ ಬರೆದುಕೊಂಡಿದ್ದಾರೆ.
ಸದ್ಯ ವಿಡಿಯೋ ವೈರಲ್ ಆಗಿದ್ದು, 80 ಸಾವಿರಕ್ಕೂ ಹೆಚ್ಚು ಈವರೆಗೆ ವೀಕ್ಷಣೆ ಮಾಡಿದ್ದು, 9 ಸಾವಿರಕ್ಕೂ ಅಧಿಕ ಮಂದಿ ಲೈಕ್ಸ್ ಮಾಡಿದ್ದಾರೆ.