ರಾಜ್ಯದಲ್ಲಿ ಹೊಸವರ್ಷ ಸಂಭ್ರಮಾಚರಣೆ ವೇಳೆ 16 ಮಂದಿ ಬಲಿ

ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಹೊಸ ವರ್ಷದ ಸಂಭ್ರಮಾಚರಣೆ ವೇಳೆ ನಡೆದ ಅವಘಡಗಳಲ್ಲಿ 16 ಮಂದಿ ಮೃತಪಟ್ಟಿದ್ದಾರೆ. ಶಿವಮೊಗ್ಗದ ವಿದ್ಯಾನಗರದಲ್ಲಿ ಗುಂಡು ಮಿಸ್ ಫೈರ್ ಆಗಿ ಮಂಜುನಾಥ್ ಓಲೇಕಾರ್, ಕೊಟ್ಟಿಗೆಪಾಳ್ಯದಲ್ಲಿ ಲಾರಿ ಢಿಕ್ಕಿಯಾಗಿ ದೇವರಾಜು ಸಾವನ್ನಪ್ಪಿದ್ದಾರೆ. ಚಿಂತಾಮಣಿಯ ದೊಡ್ಡಗಂಜೂರಿನ ನವೀನ್ ರೆಡ್ಡಿ, ಬೆಳ್ತಂಗಡಿಯಲ್ಲಿ ಕಾರು ಢಿಕ್ಕಿಯಾಗಿ ಇಬ್ಬರು, ಅಂಕೋಲಾದಲ್ಲಿ ರಸ್ತೆ ಅಪಘಾತದಲ್ಲಿ ನಾಲ್ವರು, ಕಿತ್ತೂರಿನಲ್ಲಿ ಕಾರು ಢಿಕ್ಕಿಯಾಗಿ ಅಕ್ಷತಾ ಹುಲಿಕಟ್ಟೆ ಮೃತಪಟ್ಟಿದ್ದಾರೆ.