ಮಂಗಳೂರು ಏರ್‌ಪೋರ್ಟ್‌ನಲ್ಲಿ ವಿಮಾನ ಹಾರಾಟದ ಸಮಯ ಮಾರ್ಪಾಡು

ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ರನ್‌ವೇಯ ನವೀಕರಣ ಕಾಮಗಾರಿ ನಡೆಯಲಿದ್ದು, ಜ.27ರಿಂದ ಮೇ.31ರವರೆಗೆ ವಿಮಾನ ಹಾರಾಟದ ವೇಳಾಪಟ್ಟಿ ಮಾರ್ಪಾಡು ಆಗಲಿದೆ. ಭಾನುವಾರ & ರಾಷ್ಟ್ರೀಯ ರಜಾದಿನಗಳನ್ನು ಹೊರತುಪಡಿಸಿ, ಸೋಮವಾರದಿಂದ ಶನಿವಾರದವರೆಗೆ ಬೆಳಗ್ಗೆ 9.30ರಿಂದ ಸಂಜೆ 6 ಗಂಟೆವರೆಗೆ ರನ್ ವೇ ನವೀಕರಣ ಕಾಮಗಾರಿ ನಡೆಯಲಿದೆ. ಹಾಗಾಗಿ ಈ ಅವಧಿಯಲ್ಲಿ ವಿಮಾನಗಳು ಬೆಳಗ್ಗೆ 9.30ರಿಂದ ಸಂಜೆ 6 ಗಂಟೆ ಬಳಿಕ ಕಾರ್ಯಾಚರಿಸಲಿವೆ.