ಮಣಿಪುರ ರಾಜ್ಯದ ನೂತನ ರಾಜ್ಯಪಾಲರಾಗಿ ತಮಿಳುನಾಡು ಬಿಜೆಪಿ ನಾಯಕ ಎಲ್ ಗಣೇಶನ್ ನೇಮಕ
ನವದೆಹಲಿ: ಮಣಿಪುರ ರಾಜ್ಯದ ನೂತನ ರಾಜ್ಯಪಾಲರಾಗಿ ತಮಿಳುನಾಡು ಬಿಜೆಪಿ ನಾಯಕ ಎಲ್ ಗಣೇಶನ್ ನೇಮಕಗೊಂಡಿದ್ದಾರೆ.
ತಮಿಳುನಾಡಿನ ಹಿರಿಯ ಬಿಜೆಪಿ ನಾಯಕ ಎಲ್.ಗಣೇಶನ್ ಅವರನ್ನು ಭಾನುವಾರ ಮಣಿಪುರದ ನೂತನ ರಾಜ್ಯಪಾಲರಾಗಿ ನೇಮಕ ಮಾಡಲಾಗಿದೆ. ಈ ತಿಂಗಳ ಆರಂಭದಲ್ಲಿ ಈ ಹಿಂದಿನ ರಾಜ್ಯಪಾಲರಾಗಿದ್ದ ನಜ್ಮಾ ಹೆಪ್ತುಲ್ಲಾ ಅವರು ನಿವೃತ್ತಿಯಾಗಿದ್ದು, ಅವರ ಬಳಿಕ ನಂತರ ರಾಜ್ಯಪಾಲರ ಹುದ್ದೆಯು ಖಾಲಿಯಾಗಿತ್ತು.
ಆಗಸ್ಟ್ 10 ರಂದು ಹೆಪ್ತುಲ್ಲಾ ಕಚೇರಿಯನ್ನು ತೊರೆದಿದ್ದು, ಅದೇ ದಿನ ಸಿಕ್ಕಿಂ ಗವರ್ನರ್ ಗಂಗಾ ಪ್ರಸಾದ್ ಅವರಿಗೆ ಉಸ್ತುವಾರಿ ನೀಡಲಾಗಿತ್ತು. ಇದೀಗ ಗಣೇಶನ್ ಅವರನ್ನು ರಾಜ್ಯಪಾಲರಾಗಿ ನೇಮಕ ಮಾಡಲಾಗಿದೆ. ಈ ಬಗ್ಗೆ ರಾಷ್ಟ್ರಪತಿ ಭವನದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.