Parliment winter session 2021:ರಾಜ್ಯ ಸಭೆಯ 12 ಸಂಸದರ ಅಮಾನತು: ಇಂದು ವಿರೋಧ ಪಕ್ಷಗಳ ಸಭೆ : ಮಲ್ಲಿಕಾರ್ಜುನ ಖರ್ಗೆ

Parliment winter session 2021:ರಾಜ್ಯ ಸಭೆಯ 12 ಸಂಸದರ ಅಮಾನತು: ಇಂದು ವಿರೋಧ ಪಕ್ಷಗಳ ಸಭೆ : ಮಲ್ಲಿಕಾರ್ಜುನ ಖರ್ಗೆ

ನವದೆಹಲಿ:ಸೋಮವಾರದ ಚಳಿಗಾಲದ ಅಧಿವೇಶನದ (parliment winter session)ಉಳಿದ ಅವಧಿಗೆ 12 ಸಂಸದರನ್ನು ರಾಜ್ಯಸಭೆಯಿಂದ ಅಮಾನತುಗೊಳಿಸಿದ ನಂತರ ಮುಂದಿನ ಕ್ರಮಗಳ ಕುರಿತು ಚರ್ಚಿಸಲು ವಿರೋಧ ಪಕ್ಷಗಳು ಇಂದು ಸಭೆ ಸೇರಲಿವೆ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದರು.

ಸದನದ ನಿಯಮಗಳಿಗೆ ವಿರುದ್ಧವಾಗಿ ಸಂಸದರನ್ನು ಅಮಾನತುಗೊಳಿಸಲಾಗಿದೆ ಎಂದ ಖರ್ಗೆ, ಕ್ಷಮೆ ಕೇಳುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದರು.ಈ ಕ್ರಮವು ವಿರೋಧದ ಧ್ವನಿಯನ್ನು ಕತ್ತು ಹಿಸುಕಿದಂತೆ ಆಗಿದೆ ಎಂದು ಅವರು ಹೇಳಿದರು.ರಾಜ್ಯಸಭೆಯ ವಿರೋಧ ಪಕ್ಷದ ನಾಯಕರಾಗಿರುವ ಮಲ್ಲಿಕಾರ್ಜುನ ಖರ್ಗೆ ಅವರ ಕಚೇರಿಯಲ್ಲಿ ಸಭೆ ನಡೆಯಲಿದೆ.

12 ಸಂಸದರನ್ನು ಅಮಾನತುಗೊಳಿಸಿದ ನಂತರ, ವಿರೋಧ ಪಕ್ಷಗಳು ಕ್ರಮವನ್ನು ಖಂಡಿಸಿ ಅಧಿಕೃತ ಹೇಳಿಕೆಯನ್ನು ಬಿಡುಗಡೆ ಮಾಡಿದ್ದು, ಮುಂದಿನ ಕ್ರಮದ ಬಗ್ಗೆ ತಮ್ಮ ನೆಲದ ನಾಯಕರು ಚರ್ಚಿಸಲಿದ್ದಾರೆ ಎಂದು ಹೇಳಿದರು.ಕಾಂಗ್ರೆಸ್ (congress), ಡಿಎಂಕೆ,(DMK) ಎಸ್‌ಪಿ,(sp) ಎನ್‌ಸಿಪಿ, ಶಿವಸೇನೆ, ಆರ್‌ಜೆಡಿ, ಸಿಪಿಐ(ಎಂ), ಸಿಪಿಐ, ಐಯುಎಂಎಲ್, ಎಲ್‌ಜೆಡಿ, ಜೆಡಿಎಸ್, ಎಂಡಿಎಂಕೆ, ಟಿಆರ್‌ಎಸ್, ಎಎಪಿ ವಿರೋಧ ಪಕ್ಷಗಳು ನೀಡಿರುವ ಜಂಟಿ ಹೇಳಿಕೆ ನೀಡಿವೆ.

'ಚಳಿಗಾಲದ ಅಧಿವೇಶನದ ಸಂಪೂರ್ಣ ಅವಧಿಗೆ ಸದಸ್ಯರನ್ನು ಅಮಾನತುಗೊಳಿಸುವುದಕ್ಕೆ ಸಂಬಂಧಿಸಿದಂತೆ ರಾಜ್ಯಸಭೆಯ ಎಲ್ಲಾ ಕಾರ್ಯವಿಧಾನದ ನಿಯಮಗಳನ್ನು ಉಲ್ಲಂಘಿಸಿ 12 ಸದಸ್ಯರನ್ನು ಅಮಾನತುಗೊಳಿಸಿರುವುದನ್ನು ಅನಗತ್ಯ ಮತ್ತು ಪ್ರಜಾಪ್ರಭುತ್ವ ವಿರೋಧಿ,ಇದನ್ನು ವಿರೋಧ ಪಕ್ಷಗಳ ನಾಯಕರು ಒಗ್ಗಟ್ಟಿನಿಂದ ಖಂಡಿಸುತ್ತಾರೆ' ಎಂದು ಜಂಟಿ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಅಶಿಸ್ತಿನ ವರ್ತನೆಯ ಕಾರಣಕ್ಕಾಗಿ ಹನ್ನೆರಡು ಪ್ರತಿಪಕ್ಷದ ಸಂಸದರನ್ನು ಚಳಿಗಾಲದ ಅಧಿವೇಶನದ ಉಳಿದ ಅವಧಿಗೆ ರಾಜ್ಯಸಭೆಯಿಂದ ಅಮಾನತುಗೊಳಿಸಲಾಗಿದೆ.