ರಾಮನಗರದಿಂದ ಅಯೋಧ್ಯೆಗೆ ಬೆಳ್ಳಿ ಇಟ್ಟಿಗೆ ಅರ್ಪಣೆ

ರಾಮನಗರ: ಅಯೋಧ್ಯೆ ರಾಮಮಂದಿರ ನಿರ್ಮಾಣಕ್ಕೆ ರಾಮನಗರದಿಂದ ಬೆಳ್ಳಿ ಇಟ್ಟಿಗೆ ಅರ್ಪಿಸಲಾಗಿದೆ. ಬೆಳ್ಳಿ ಇಟ್ಟಿಗೆಗೆ ರಾಮನ ಭಕ್ತರಿಂದ ಇಂದು (ಡಿ.12) ವಿಶೇಷ ಪೂಜೆ ಸಲ್ಲಿಸಲಾಯಿತು. ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಸಮ್ಮುಖದಲ್ಲಿ ರಾಮನಗರ ಕೆಂಗಲ್ ಆಂಜನೇಯ ದೇಗುಲ, ರಾಮನಗರ ಬೆಟ್ಟದಲ್ಲಿ ಪೂಜೆ ಸಲ್ಲಿಸಲಾಯಿತು. ಬಿಜೆಪಿ ಮುಖಂಡ ಗೌತಮ್ ಗೌಡ ನೇತೃತ್ವದಲ್ಲಿ 150 ಮಂದಿ ಶ್ರೀರಾಮನ ಭಕ್ತರು ಆಯೋಧ್ಯೆಗೆ ಬೆಳ್ಳಿ ಇಟ್ಟಿಗೆ ಸಮರ್ಪಿಸಲು ತೀರ್ಮಾನಿಸಲಾಯಿತು.