ಪಾಕ್ ನ ಮತ್ತೊಂದು ಡ್ರೋನ್ ಹೊಡೆದುರುಳಿಸಿದ ಬಿಎಸ್​ಎಫ್ ಪಡೆ

ಪಾಕ್ ನ ಮತ್ತೊಂದು ಡ್ರೋನ್ ಹೊಡೆದುರುಳಿಸಿದ ಬಿಎಸ್​ಎಫ್ ಪಡೆ

ಅಮೃತಸರ: ಗಡಿ ಭದ್ರತಾ ಪಡೆ ಪಾಕಿಸ್ತಾನದಿಂದ ಪಂಜಾಬ್‌ನ ಅಮೃತಸರ ಜಿಲ್ಲೆಗೆ ಪ್ರವೇಶಿಸಿದ ಡ್ರೋನ್​​ನ್ನು ಹೊಡೆದುರುಳಿಸಿದೆ. ಮಂಗಳವಾರ ಸಂಜೆ 7:20 ರ ಸುಮಾರಿಗೆ ಡ್ರೋನ್ ಭಾರತದ ಭೂಪ್ರದೇಶವನ್ನು ಪ್ರವೇಶಿಸಿತ್ತು & ಬುಧವಾರ ಬೆಳಿಗ್ಗೆ, ಭರೋಪಾಲ್‌ನ ಗಡಿ ಹೊರ ಠಾಣೆಯಿಂದ ಸುಮಾರು 20 ಮೀಟರ್ ದೂರದಲ್ಲಿ ಪಾಕಿಸ್ತಾನದ ಭಾಗದಲ್ಲಿ ಬಿದ್ದ ಡ್ರೋನ್ ಅನ್ನು ಸೈನಿಕರು ನೋಡಿದ್ದಾರೆ. ನಂತರ ಡ್ರೋನ್ ಬಂದ ಜಾಗಕ್ಕೆ ಹಿಂತಿರುಗುವಾಗ ಗಡಿ ಭದ್ರತಾ ಪಡೆ ಹೊಡೆದುರುಳಿಸಿದೆ ಎಂದು ವರದಿಯಾಗಿದೆ.