ಗೆಳತಿಯೊಂದಿಗಿನ ವಾಗ್ವಾದದಿಂದ ಬೇಸತ್ತು 40 ಲಕ್ಷ ರೂ. ಬೆಲೆಯ ಮರ್ಸಿಡಿಸ್ ಕಾರಿಗೆ ಬೆಂಕಿ ಹಚ್ಚಿದ ವೈದ್ಯ!
ಚೆನ್ನೈ: ಗೆಳತಿಯೊಂದಿಗಿನ ವಾಗ್ವಾದದಿಂದ ಬೇಸತ್ತು 29 ವರ್ಷದ ವೈದ್ಯನೊಬ್ಬ ತನ್ನ ಮರ್ಸಿಡಿಸ್ ಕಾರಿಗೆ ಬೆಂಕಿ ಹಚ್ಚಿದ ಘಟನೆ ತಮಿಳುನಾಡಿನ ಕಾಂಚೀಪುರಂ ಜಿಲ್ಲೆಯಲ್ಲಿ ಗುರುವಾರ ನಡೆದಿದೆ.
ಧರ್ಮಪುರಿಯ 28 ವರ್ಷದ ಕವಿನ್ ಕಳೆದ ವರ್ಷ ಕಾಂಚೀಪುರಂನ ಖಾಸಗಿ ವೈದ್ಯಕೀಯ ಕಾಲೇಜಿನಲ್ಲಿ ಎಂಬಿಬಿಎಸ್ ಪೂರ್ಣಗೊಳಿಸಿದ್ದಾನೆ.
ಕವಿನ್ ಹಾಗೂ ಆತನ ಗೆಳತಿ ಲಾಂಗ್ ಡ್ರೈವ್ ಹೋದಾಗ ಯಾವುದೋ ವಿಷಯಕ್ಕೆ ಜಗಳವಾಡಿದ್ದಾರೆ. ಇದರಿಂದ ಕೋಪಗೊಂಡ ಕವಿನ್ 40 ಲಕ್ಷ ರೂ. ಬೆಲೆಯ ಮರ್ಸಿಡಿಸ್ ಕಾರಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ.
ಇವರಿಬ್ಬರ ಕಾದಾಟ ನೋಡಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ಇಬ್ಬರನ್ನೂ ಠಾಣೆಗೆ ಕರೆತಂದಿದ್ದು, ವಿಚಾರಣೆ ನಂತ್ರ ಇಬ್ಬರನ್ನೂ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ.