ಇಟಲಿ ಕಾಂಗ್ರೆಸ್ ಒಂದು ನಾಯಿಯೂ ಭಾರತ ಪರ ಬೊಗಳಿಲ್ಲ, ಅದು ಚೀನಾ ಮತ್ತು ಪಾಕಿಸ್ತಾನದ ಎಂಜಲು ತಿಂದು ಬಾಲ ಅಲ್ಲಾಡಿಸುತ್ತೆ'

ಇಟಲಿ ಕಾಂಗ್ರೆಸ್ ಒಂದು ನಾಯಿಯೂ ಭಾರತ ಪರ ಬೊಗಳಿಲ್ಲ, ಅದು ಚೀನಾ ಮತ್ತು ಪಾಕಿಸ್ತಾನದ ಎಂಜಲು ತಿಂದು ಬಾಲ ಅಲ್ಲಾಡಿಸುತ್ತೆ'
ದೇಶಕ್ಕಾಗಿ ಬಿಜೆಪಿ ಮನೆಯ ಒಂದು ನಾಯಿಯೂ ಸತ್ತಿಲ್ಲ ಎಂದಿದ್ದ ಮಲ್ಲಿಕಾರ್ಜುನ ಖರ್ಗೆ ಹೇಳಿಕೆಗೆ ಸಿ.ಟಿ.ರವಿ ತಿರುಗೇಟು ನೀಡಿದ್ದಾರೆ. ಬೆಳಗಾವಿ: ದೇಶಕ್ಕಾಗಿ ಬಿಜೆಪಿ ಮನೆಯ ಒಂದು ನಾಯಿಯೂ ಸತ್ತಿಲ್ಲ ಎಂದಿದ್ದ ಮಲ್ಲಿಕಾರ್ಜುನ ಖರ್ಗೆ ಹೇಳಿಕೆಗೆ ಸಿ.ಟಿ.ರವಿ ತಿರುಗೇಟು ನೀಡಿದ್ದಾರೆ.
ಭಾರತದಲ್ಲಿ ಈಗಿರೋದು ಇಟಲಿ ಕಾಂಗ್ರೆಸ್. ಇಟಲಿ ಕಾಂಗ್ರೆಸ್ ನಾಯಿ ಭಾರತದ ಪರವಾಗಿ ಬೊಗಳುವುದಿಲ್ಲ ಎಂದು ಟಾಂಗ್ ನೀಡಿದ್ದಾರೆ. ಬೆಳಗಾವಿಯಲ್ಲಿ ಮಾತನಾಡಿದ ಸಿ.ಟಿ.ರವಿ, ಆ ಕಾಂಗ್ರೆಸ್ ಶಕೆ ಮುಗಿದು, ಈಗ ಇರೋದು ಇಟಲಿ ಕಾಂಗ್ರೆಸ್ ಎಂದು ವ್ಯಂಗ್ಯ ಮಾಡಿದರು. ಇಟಲಿ ಕಾಂಗ್ರೆಸ್ ಒಂದು ನಾಯಿಯೂ ಭಾರತ ಪರ ಬೊಗಳಿಲ್ಲ.

ಅದು ಚೀನಾ ಮತ್ತು ಪಾಕ್ ಪರ ಬೊಗಳುತ್ತೆ. ಇಟಲಿ ಕಾಂಗ್ರೆಸ್ ಒಂದೂ ನಾಯಿಯೂ ಇದುವರೆಗೆ ಭಾರತ ಪರ ಬಾಲ ಅಲ್ಲಾಡಿಸಿಲ್ಲ ಹಾಗೂ ಬೊಗಳಿಲ್ಲ. ಭಾರತದ ರಕ್ಷಣೆ ಕೆಲಸ ಮಾಡಿಲ್ಲ. ಅದು ಚೀನಾ, ಪಾಕಿಸ್ತಾನದ ಎಂಜಲು ತಿಂದಿದೆ ಎಂದು ವಾಗ್ದಾಳಿ ನಡೆಸಿದರು.

ಪಾಕ್ ಪರ ಬಾಲ ಅಲ್ಲಾಡಿಸಿ ಬೊಗಳುತ್ತೆ. ಆ ನಾಯಿಯನ್ನು ಇವತ್ತು ನೀವು ಸಾಕಿದ್ದು. ಈಗಿರೋದು ನಾಯಿ ಮಹಾತ್ಮ ಗಾಂಧಿ ಕಾಲದ ಕಾಂಗ್ರೆಸ್ ನಾಯಿ ಅಲ್ಲ. ಈಗ ಇರುವ ಇಟಲಿ ಕಾಂಗ್ರೆಸ್ ನಾಯಿ ಚೀನಾ, ಪಾಕ್ ಪರ ಬಾಲ ಅಲ್ಲಾಡಿಸುತ್ತಾ ಭಾರತ ಹಾಗೂ ಭಾರತೀಯ ಸೈನ್ಯದ ವಿರುದ್ಧ ಬೊಗಳುತ್ತೆ ಎಂದು ಮಲ್ಲಿಕಾರ್ಜುನ ಖರ್ಗೆ ಅವರ ಹೇಳಿಕೆಗೆ ತಿರುಗೇಟು ನೀಡಿದರು.