ಸಾದಪುರದಲ್ಲಿ ಶೀಲಶಂಕಿಸಿ ಪತಿಯಿಂದಲೇ ಪತ್ನಿ ಬರ್ಬರ ಕೊಲೆ

ರಾಯಚೂರು: ಜಿಲ್ಲೆಯ ಮಾನ್ವಿ ತಾಲೂಕಿನ ಸಾದಪುರದಲ್ಲಿ ಶೀಲಶಂಕಿಸಿ ಪತಿಯಿಂದಲೇ ಪತ್ನಿ ಬರ್ಬರ ಕೊಲೆ ಮಾಡಿರುವ ಘಟನೆ ನಡೆದಿದೆ.
22 ವರ್ಷದ ಪವಿತ್ರಾ ಅಲಿಯಾಸ್ ಮಮತಾ ಕೊಲೆಯಾಗಿರುವ ಪತ್ನಿ. ಪಾಪಿ ಪತಿ ನಾಗರಾಜ್ ಎಂಬಾತನಿಂದ ಕೃತ್ಯ ನಡೆದಿದೆ.
ನಾಲ್ಕು ವರ್ಷಗಳ ಹಿಂದೆಷ್ಟೆ ಮದುವೆಯಾಗಿತ್ತು. ಮದುವೆಯಾದ ಬಳಿಕ ಹೆಂಡತಿಯ ಬಗ್ಗೆ ಪ್ರತಿನಿತ್ಯ ಅನುಮಾನ ಪಡುತ್ತಿದ್ದನು. ನೀನು ಬೇರೆ ಅವರ ಜಿತೆ ಸಂಬಂಧ ಇಟ್ಟುಕೊಂಡಿದ್ದೀಯಾ ಎಂದು ಹೆಂಡತಿ ಪವಿತ್ರಾಗೆ ದಿನ ಕಿರುಕುಳ ನೀಡುತ್ತಿದ್ದನು. ಈ ಸಂಬಂಧ ಮಾನ್ವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ