BREAKING : ಕಂದಕಕ್ಕೆ ಉರುಳಿದ ಸೇನಾ ವಾಹನ : 16 ಯೋಧರು ಹುತಾತ್ಮ

ಸಿಕ್ಕಿಂ: ಸೇನಾ ಟ್ರಕ್‌ವೊಂದು ರಸ್ತೆ ಅಪಘಾತಕ್ಕೆ ಒಳಗಾದ ಪರಿಣಾಮ ವಾಹನದ ಒಳಗಿದ್ದ 16 ಮಂದಿ ಭಾರತೀಯ ಯೋಧರು ಹುತಾತ್ಮರಾದ ಘಟನೆಯು ಉತ್ತರ ಸಿಕ್ಕಿಂನ ಝೀಮಾ ಎಂಬಲ್ಲಿ ಸಂಭವಿಸಿದೆ . ಝೀಮಾದ ಕಡಿದಾದ ತಿರುವಿನಲ್ಲಿ ವಾಹನವನ್ನು ಇಳಿಸುತ್ತಿದ್ದ ಸಂದರ್ಭದಲ್ಲಿ ವಾಹನವು ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ .
ಉತ್ತರ ಸಿಕ್ಕಿಂನಲ್ಲಿ ಅಪಘಾತಕ್ಕೀಡಾದ ಭಾರತೀಯ ಸೇನಾ ವಾಹನವು ಚಾಟೆನ್‌ನಿಂದ ಥಾಂಗು ಪ್ರದೇಶಕ್ಕೆ ತೆರಳುತ್ತಿದ್ದ ಮೂರು ವಾಹನಗಳ ಬೆಂಗಾವಲಿನ ಭಾಗವಾಗಿತ್ತು ಎಂದು ತಿಳಿದು ಬಂದಿದೆ . ಅಪಘಾತದಲ್ಲಿ ಹುತಾತ್ಮರಾದ ಯೋಧರ ಬಗ್ಗೆ ಇನ್ನಷ್ಟೇ ಮಾಹಿತಿ ತಿಳಿಯಬೇಕಿದೆ . ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.