ನಾಳೆಯಿಂದ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ: ರಸ್ತೆ ಗುಂಡಿ ಮುಚ್ಚುವ ಪ್ರಕ್ರಿಯೆ ಚುರುಕು

ನಾಳೆಯಿಂದ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ: ರಸ್ತೆ ಗುಂಡಿ ಮುಚ್ಚುವ ಪ್ರಕ್ರಿಯೆ ಚುರುಕು

ಬೆಂಗಳೂರು: ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ ನವಂಬರ್ 2 ರಿಂದ ಎರಡು ದಿನಗಳ ಕಾಲ ನಡೆಯಲಿರುವ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ರಸ್ತೆ ಗುಂಡಿ ಮುಚ್ಚುವ ಕಾರ್ಯ ಭರದಿಂದ ಸಾಗುತ್ತಿದೆ. ರಸ್ತೆ ಗುಂಡಿ ಪತ್ತೆ ಸಂಖ್ಯೆ ಸುಮಾರು 25 ಸಾವಿರಕ್ಕೆ ಏರಿಕೆಯಾಗಿರುವ ನಡುವೆ ಕಳೆದ ಹತ್ತು ದಿನಗಳಿಂದ ನಡೆಯುತ್ತಿರುವ ರಸ್ತೆ ಗುಂಡಿಗಳನ್ನು ಮುಚ್ಚುವ ಪ್ರಕ್ರಿಯೆಯನ್ನು ಬಿಬಿಎಂಪಿ ಚುರುಕುಗೊಳಿಸಿದೆ.

ಬಿಬಿಎಂಪಿ ಪೂರ್ವ ವಲಯದಲ್ಲಿ ಅತಿ ಹೆಚ್ಚು ರಸ್ತೆ ಗುಂಡಿಗಳು ಪತ್ತೆಯಾಗಿವೆ.

ಉಳಿದಂತೆ ಪಶ್ಚಿಮ, ದಕ್ಷಿಣ ಹಾಗೂ ಆರ್‌ಆರ್‌ನಗರ ವಲಯದಲ್ಲಿ 3 ಸಾವಿರಕ್ಕೂ ಅಧಿಕ ರಸ್ತೆ ಗುಂಡಿಗಳು ಪತ್ತೆಯಾಗಿವೆ. ಉಳಿದಂತೆ ದಾಸರಹಳ್ಳಿಯಲ್ಲಿ 2 ಸಾವಿರದಷ್ಟು ಗುಂಡಿ ಪತ್ತೆಯಾದರೂ ಕೇವಲ 600 ರಸ್ತೆ ಗುಂಡಿ ಮುಚ್ಚಲಾಗಿದೆ. ದೇಶ ಹಾಗೂ ವಿದೇಶಗಳ ವಿವಿಧ ಕಡೆಗಳಿಂದ ಹೂಡಿಕೆದಾರರು ಬರುತ್ತಿರುವ ಹಿನ್ನೆಲೆಯಲ್ಲಿ ನಗರದ ಸ್ವಚ್ಛತೆ ಹಾಗೂ ಸೌಂದರ್ಯೀಕರಣಕ್ಕೆ ಹೆಚ್ಚಿನ ಒತ್ತು ನೀಡುವಂತೆ ಆಡಳಿತಾಧಿಕಾರಿ ರಾಕೇಶ್ ಸಿಂಗ್ ನಿರ್ದೇಶಿಸಿರುವ ಹಿನ್ನೆಲೆಯಲ್ಲಿ,ವಿವಿಧ ಕಾಮಗಾರಿ ನಡೆಯುತ್ತಿದೆ. ರಸ್ತೆಗಳ ಡಾಂಬರೀಕರಣ, ರಸ್ತೆ ಗುಂಡಿಗಳನ್ನು ಮುಚ್ಚುವುದು, ಪಾದಚಾರಿ ಮಾರ್ಗಗಳ ಅಭಿವೃದ್ಧಿ, ತ್ಯಾಜ್ಯ, ಕಟ್ಟಡ ಭಗ್ನಾವಶೇಷಗಳ ತೆರವು, ರಸ್ತೆ ಬದಿಯಿರುವ ಮರಗಳ ಕೊಂಬೆಗಳ ಕಟಾವು, ಫ್ಲೆಕ್ಸ್‌ ತೆರವು, ಬೀದಿ ದೀಪಗಳನ್ನು ಸರಿಪಡಿಸುವುದು, ಮುಖ್ಯ ಹಾಗೂ ಉಪಮುಖ್ಯ ರಸ್ತೆಗಳಲ್ಲಿ ವಿಭಜಕಗಳ ಅಭಿವೃದ್ಧಿ ಹಾಗೂ ಸುಂದರ ಸಸಿಗಳನ್ನು ನೆಡಲಾಗುತ್ತಿದೆ..