ಬೆಂಗಳೂರು-ಮುಂಬೈ ನಡುವೆ ಗ್ರೀನ್‌ ಎಕ್ಸ್‌ಪ್ರೆಸ್‌ ಹೆದ್ದಾರಿ ಅಭಿವೃದ್ಧಿ 17hr19 shares

ಬೆಂಗಳೂರು-ಮುಂಬೈ ನಡುವೆ ಗ್ರೀನ್‌ ಎಕ್ಸ್‌ಪ್ರೆಸ್‌ ಹೆದ್ದಾರಿ ಅಭಿವೃದ್ಧಿ 17hr19 shares

ವದೆಹಲಿ: ಬೆಂಗಳೂರು-ಮುಂಬೈ ನಡುವೆ ಹಸಿರು ಎಕ್ಸ್‌ಪ್ರೆಸ್‌ ಹೆದ್ದಾರಿ ನಿರ್ಮಿಸಲು ಯೋಜಿಸಲಾಗಿದ್ದು, ಇದರಿಂದ ಎರಡು ನಗರಗಳ ನಡುವಿನ ಪ್ರಯಾಣದ ಅಂತರ ಐದು ಗಂಟೆಗಳವರೆಗೆ ತಗ್ಗಲಿದೆ ಎಂದು ಕೇಂದ್ರ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ ತಿಳಿಸಿದ್ದಾರೆ.

ಜತೆಗೆ ಹೆಚ್ಚು ಸಂಚಾರ ದಟ್ಟಣೆ ಇರುವ ರಾಜ್ಯ ಹೆದ್ದಾರಿಗಳನ್ನು 25 ವರ್ಷಗಳ ಕಾಲ ಕೇಂದ್ರ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಯೋಜಿಸಿದ್ದು, ಅದನ್ನು 4ರಿಂದ 6 ಪಥಗಳ ಹೆದ್ದಾರಿಯಾಗಿ ವಿಸ್ತರಿಸಿ ಅಭಿವೃದ್ಧಿಪಡಿಸಲಾಗುವುದು ಎಂದು ಅವರು ಮಾಹಿತಿ ನೀಡಿದರು.

ರಾಜ್ಯ ಹೆದ್ದಾರಿಗಳ ಹೂಡಿಕೆಯನ್ನು ಬಡ್ಡಿ ಸಮೇತ ಮತ್ತು ಭೂಸ್ವಾಧೀನ ವೆಚ್ಚದೊಂದಿಗೆ 12ರಿಂದ 13 ವರ್ಷಗಳವರೆಗೆ ಟೋಲ್‌ ಸಂಗ್ರಹಿಸುವ ಮೂಲಕ ಅದನ್ನು ಮರಳಿ ಪಡೆಯಲಾಗುವುದು ಎಂದು ನಿತಿನ್‌ ಗಡ್ಕರಿ ತಿಳಿಸಿದರು.

ಈ ರೀತಿ ದೇಶದಲ್ಲಿ ಒಟ್ಟು 25 ಹಸಿರು ಎಕ್ಸ್‌ಪ್ರೆಸ್‌ ಹೆದ್ದಾರಿಗಳನ್ನು ಅಭಿವೃದ್ಧಿಪಡಿಸಲಾಗುವುದು. ಇದಕ್ಕಾಗಿ ಖಾಸಗಿ ಹೂಡಿಕೆದಾರರಿಂದ ಹೂಡಿಕೆ ನಿರೀಕ್ಷಿಸಲಾಗಿದೆ ಎಂದರು.