ಉಳ್ಳಾಲ ನಗರಸಭೆ ಭ್ರಷ್ಟಾಚಾರ: ಲೋಕಾಯುಕ್ತ ತನಿಖೆಗೆ ಎಸ್‍ಡಿಪಿಐ ಆಗ್ರಹ

ಉಳ್ಳಾಲ ನಗರಸಭೆ ಭ್ರಷ್ಟಾಚಾರ: ಲೋಕಾಯುಕ್ತ ತನಿಖೆಗೆ ಎಸ್‍ಡಿಪಿಐ ಆಗ್ರಹ

ಳ್ಳಾಲ: ಉಳ್ಳಾಲ ನಗರಸಭೆಯಲ್ಲಿ ಕಾಂಗ್ರೆಸ್ ನೇತೃತ್ವದ ಆಡಳಿತದಲ್ಲಿ ಮೂಲಭೂತ ಸೌಕರ್ಯ ಅಭಿವೃದ್ಧಿ ಕುಂಠಿತಗೊಂಡಿದ್ದು, ಉಳ್ಳಾಲ ನಗರಸಭೆಯ ಪೌರಾಯುಕ್ತೆ ತಕ್ಷಣ ಉಳ್ಳಾಲದ ಮೂಲಭೂತ ಸೌಕರ್ಯದ ಅಭಿವೃದ್ಧಿಗೆ ಕ್ರಮ ಕೈಗೊಳ್ಳಬೇಕು ಮತ್ತು ಕಳೆದ ಎರಡು ವರ್ಷದ ಅವ„ಯಲ್ಲಿ ನಡೆದ ಭೃಷ್ಟಾಚಾರದ ವಿಚಾರದಲ್ಲಿ ಕೂಲಂಕುಷ ಪರಿಶೀಲನೆ ನಡೆಸಿ ಲೋಕಾಯುಕ್ತ ತನಿಖೆಗೆ ವಹಿಸಿಕೊಡಬೇಕು ಎಂದು ನಗರಸಭೆಯ ಎಸ್‍ಡಿಪಿಐ ಸದಸ್ಯ ರಮೀಝ್ ನಗರಸಭಾ ಪೌರಾಯುಕ್ತೆಯನ್ನು ಆಗ್ರಹಿಸಿದ್ದು, ಅ„ಕಾರಿಗಳು ಸೂಕ್ತ ಕ್ರಮಕೈಗೊಳ್ಳದೆ ಇದ್ದಲ್ಲಿ ನಗರಸಭೆಯ ಎದುರು ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ.

ಉಳ್ಳಾಲ ನಗರ ಎಸ್‍ಡಿಪಿಐ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಆವರು ಕಳೆದ ಎರಡು ವರ್ಷದ ಕಾಂಗ್ರೆಸ್ ಅ„ಕಾರದಲ್ಲಿ ಭ್ರಷ್ಟಾಚಾರ ಹೆಚ್ಚಾಗಿದೆ. ನಗರಸಭೆಯ ವ್ಯಾಪ್ತಿಯಲ್ಲಿ ಈ ಹಿಂದೆ ನಡೆದ ಕಾಮಗಾರಿಗೆ ಸಂಬಂ„ಸಿದಂತೆ ಗುತ್ತಿಗೆದಾರರಿಗೆ ಕೋಟ್ಯಾಂತರ ರೂ ಬಿಲ್ಲ್ ಬಾಕಿಯಿದ್ದು, ಹುತ್ತಿಗೆದಾರರಿಗೆ ಬಿಲ್ಲ್ ಪಾವತಿಸಬೇಕು ಮತ್ತು ನಕಲಿ ಬಿಲ್ಲ್‍ಗಳಿದ್ದರೆ ಗುತ್ತಿಗೆದಾರರ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕು. ಕೆಲವೊಂದು ವಾರ್ಡ್‍ಗಳಲ್ಲಿ ಅಭಿವೃದ್ಧಿ ಕಾಮಗಾರಿ ನಡೆಸದೆ ತಾರತಮ್ಯ ಮಾಡಲಾಗುತ್ತಿದೆ. ಕುಡಿಯುವ ನೀರಿನ ಸಮಸ್ಯೆಯಿದ್ದು, ತಕ್ಷಣ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ತನಿಖೆಗೆ ಒತ್ತಾಯ: ನಗರಸಭಾ ವ್ಯಾಪ್ತಿಯಲ್ಲಿ ಬಹುಮಹಡಿ ಕಟ್ಟಡದ ಮಾಲಿಕರು ಹಾಗೂ ಬಿಲ್ಡರ್‍ಗಳು ನಿಗದಿತ ಕಟ್ಟಡ ಪರವಾಣಿಗೆ ಉಲ್ಲಂಘಿಸಿ ಅತಿಕ್ರಮಣ ಮಾಡಿದ್ದು, ಹಲವು ಕಟ್ಟಡಗಳಿಗೆ ನಿರಪೇಕ್ಷಣಾ ಪತ್ರ ನೀಡಲಾಗಿದೆ.ತೊಕ್ಕೊಟ್ಟಿನಲ್ಲಿರುವ ನಗರಸಭೆಯ ಕಟ್ಟಡದ ಅಂಗಡಿಮುಗ್ಗಟ್ಟುಗಳನ್ನ ಬಂಡವಾಳಶಾಹಿಗಳು ಬೇನಾಮಿ ಹೆಸರಿನಲ್ಲಿ ಅಂಗಡಿ ಕೋಣೆಗಳ್ನು ಪಡೆದು ಸಾವಿರಾರು ರೂಗಳಿಗೆ ಒಳಬಾಡಿಗೆ ನೀಡಿದ್ದಾರೆ. ಕೆಲವು ವಾರ್ಡ್‍ಗಳಲ್ಲಿ ಕಾಮಗಾರಿ ನಡೆಯದೆ ಗುತ್ತಿಗೆದಾರರಿಗೆ ಹಣ ಪಾವತಿ ಕುರಿತಂತೆ ತನಿಖೆಯಾಗಬೇಕು ಎಂದು ಆಗ್ರಹಿಸಿದರು.

ಬೇಡಿಕೆ ಈಡೇರಿಸಿ : ಉಳ್ಳಾಲಬೈಲ್ ಪ್ರದೇಶದಲ್ಲಿ ಸರಕಾರಿ ಜಾಗದಲ್ಲಿ ಕ್ರೀಡಾಂಗಣ, ಅಜಾದ್ ನಗರದಲ್ಲಿ ಉದ್ಯಾನವನ, ಕೋಟಿ ರೂ ವೆಚ್ಚದಲ್ಲಿ ನಿರ್ಮಿಸಿರುವ ಕುಡಿಯುವ ನೀರಿ ಘಟಕಗಳ ದುರಸ್ತಿ, ಡ್ರೈನೇಜ್ ವ್ಯವಸ್ಥೆಗೆ ಕ್ರಮ, ಡ್ರೈನೇಜ್ ವ್ಯವಸ್ಥೆಯಾಗದ ಬಹುಮಹಡಿ ಕಟ್ಟಗಳಿಗೆ ಅನುಮತಿ ನೀಡಬಾರದು, ಎಲ್ಲಾ ಸರಕಾರಿ ಜಮೀನಿಉಗಳಿಗೆ ಬೇಲಿ ಹಾಕಿ ನಾಮಫಲಕ ಅಳವಡಿಕೆ, ತೆರಿಗೆ ಪುನರ್ ಪರಿಶೀಲನೆ, ಉಳ್ಳಾಲಬೈಲ್, ಬೊಟ್ಟು, ಕೋಟೆಪುರ, ಕೋಡಿ, ಅಳೇಕಲದಲ್ಲಿ ಕುಡಿಯುವ ನೀರಿನ ಸಮಸ್ಯೆ ಪರಿಹಾರ ಮತ್ತು ಡ್ರೈನೇಜ್ ಸ್ವಚ್ಛಗೊಳಿಸಿ ಮೇಲ್ಬಾಗವನ್ನು ಮುಚ್ಚುವಕಾಮಗಾರಿ ನಡೆಸಬೇಕು ಎಂದು ಆಗ್ರಹಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಎಸ್ ಡಿಪಿಐಉಳ್ಳಾಲ ನಗರಸಭೆ ಅಧ್ಯಕ್ಷ ಅಬ್ಬಾಸ್ ಎ.ಆರ್., ಉಪಾಧ್ಯಕ್ಷ ಇಮ್ತಿಯಾಝ್ ಕೋಟೆಪುರ, ಮಂಗಳೂರು ವಿಧಾನಸಭಾ ಕ್ಷೇತ್ರ ಸಮಿತಿ ಸದಸ್ಯ ಸುಹೈಲ್ ಉಳ್ಳಾಲ್. ಮಾಧ್ಯಮ ರಿಝ್ವಾನ್ ಸಜಿಪ, ನಗರಸಮಿತಿ ಸದಸ್ಯರುಗಳಾದ ಸಮೀರ್ ರೆಹಮತುಲ್ಲಾ ಎ.ಎಂ. ಉಪಸ್ಥಿತರಿದ್ದರು.