ಅಮಿತ್‌ ಶಾ ಸಂಸತ್ತಿಗೆ ಬಂದರೆ ನನ್ನ ತಲೆ ಬೋಳಿಸಿಕೊಳ್ಳುತ್ತೇನೆ: ಟಿಎಂಸಿ ಸಂಸದ ಡೆರೆಕ್‌ ಒಬ್ರಿಯಾನ್‌

ಅಮಿತ್‌ ಶಾ ಸಂಸತ್ತಿಗೆ ಬಂದರೆ ನನ್ನ ತಲೆ ಬೋಳಿಸಿಕೊಳ್ಳುತ್ತೇನೆ: ಟಿಎಂಸಿ ಸಂಸದ ಡೆರೆಕ್‌ ಒಬ್ರಿಯಾನ್‌

ನವದೆಹಲಿ, ಜು.04: "ಕೇಂದ್ರ ಗೃಹ ಸಚಿವ ಅಮಿತ್ ಶಾ ನಾಳೆ ಸಂಸತ್ತಿಗೆ ಬಂದು ದೆಹಲಿ ಅತ್ಯಾಚಾರ ಪ್ರಕರಣದ ಬಗ್ಗೆ ಹೇಳಿಕೆ ನೀಡಿದರೆ ನನ್ನ ತಲೆ ಬೋಳಿಸಿಕೊಳ್ಳುತ್ತೇನೆ," ಎಂದು ಇಂಡಿಯಾ ಟುಡೆಗೆ ನೀಡಿದ ಸಂದರ್ಶನದಲ್ಲಿ ತೃಣಮೂಲ ಕಾಂಗ್ರೆಸ್‌ (ಟಿಎಂಸಿ) ಸಂಸದ ಡೆರೆಕ್ ಒಬ್ರಿಯಾನ್‌ ಹೇಳಿದ್ದಾರೆ. ಹಾಗೆಯೇ ''ಸಚಿವ ಅಮಿತ್‌ ಶಾ ಪೆಗಾಸಸ್‌ ಬೇಹುಗಾರಿಕೆ ಪ್ರಕರಣದಿಂದ ತಪ್ಪಿಸಿಕೊಳ್ಳುತ್ತಿದ್ದಾರೆ,'' ಎಂದು ಆರೋಪಿಸಿದ್ದಾರೆ.

ಮಾಧ್ಯಮದ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಟಿಎಂಸಿ ಸಂಸದ ಡೆರೆಕ್ ಒಬ್ರಿಯಾನ್‌, ''ನೀವು ರಂಗಭೂಮಿಯ ಬಗ್ಗೆ ಮಾತನಾಡುತ್ತಿದ್ದೀರಿ. ನಾವು ಸತತವಾಗಿ ಏಳು ಬಾರಿ ಆಸ್ಕರ್ ವಿಜೇತರಾಗಿದ್ದೇವೆ ಮತ್ತು ಇನ್ನೂ ಟೆಲಿಪ್ರೊಂಪ್ಟರ್ ರಾಜನಿಗೆ ಆಸ್ಕರ್ ಇಲ್ಲ,'' ಎಂದು ಪ್ರಧಾನಿ ನರೇಂದ್ರ ಮೋದಿಯನ್ನು ಲೇವಡಿ ಮಾಡಿದ್ದಾರೆ.

''ಪ್ರತಿಪಕ್ಷಗಳು ಬಹಳ ಸ್ಪಷ್ಟವಾಗಿವೆ. 15-16 ವಿರೋಧ ಪಕ್ಷಗಳು ಸಂಸತ್ತಿನಲ್ಲಿ ಚರ್ಚೆಯನ್ನು ಬಯಸುತ್ತೇವೆ. ನಾವು ಮೂರು ಸಮಸ್ಯೆಗಳನ್ನು ಚರ್ಚಿಸಲು ಬಯಸುತ್ತೇವೆ. ಚರ್ಚೆ ಮಾಡಿ ಮತ್ತು ಕೃಷಿ ಕಾನೂನುಗಳನ್ನು ರದ್ದುಗೊಳಿಸಬೇಕು. ಆರ್ಥಿಕತೆ, ಉದ್ಯೋಗಗಳು, ಬೆಲೆ ಏರಿಕೆ ಮತ್ತು ಹಣದುಬ್ಬರದ ಬಗ್ಗೆ ಚರ್ಚೆ ಮಾಡಬೇಕು. ರಾಷ್ಟ್ರೀಯ ಭದ್ರತೆಯ ದೃಷ್ಟಿಯಿಂದ ಮೊದಲು ಪೆಗಾಸಸ್ ಬಗ್ಗೆ ಚರ್ಚಿಸಬೇಕು,'' ಎಂದು ಆಗ್ರಹಿಸಿದ್ದಾರೆ.

ವಿಪಕ್ಷಗಳು ಯಾವುದೇ ಚರ್ಚೆಗಳಿಗೆ ಅವಕಾಶ ನೀಡುತ್ತಿಲ್ಲ ಎಂಬ ಸರ್ಕಾರದ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಟಿಎಂಸಿ ಸಂಸದ, ''ತಪ್ಪು. ನಾವು ಈಗಾಗಲೇ ರಾಜ್ಯಸಭೆಯಲ್ಲಿ ಕೋವಿಡ್ ಕುರಿತು ಚರ್ಚೆ ನಡೆಸಿದ್ದೇವೆ. ಹಾಗೆಯೇ ಬಳಿಕ ಸಮ್ಮೇಳನ ಕೊಠಡಿಯಲ್ಲಿ ಸ್ವಲ್ಪ ಕೋವಿಡ್‌ ಕುರಿತಾದ ಪ್ರೆಸೆಂಟೇಶನ್‌ ಇತ್ತು. ಇದು ಸಂಸತ್ತು. ನಾವು ಸಂಸತ್ತಿನ ನಿಯಮಗಳನ್ನು ಪಾಲಿಸಬೇಕು. ಕಳೆದ ಏಳು ವರ್ಷಗಳಲ್ಲಿ ಬಿಜೆಪಿ ಸರ್ಕಾರವು ಶೇಕಡ 11 ರಷ್ಟು ಮಸೂದೆಗಳನ್ನು ಮರು ಪರಿಶೀಲಿಸಿದೆ. ನೋಡುತ್ತಿರುವ ಯಾವುದೇ ಬಿಜೆಪಿ ವಕ್ತಾರರು ಅಥವಾ ಸಚಿವರು ನನಗೆ ಹೇಳಿ. ಯುಪಿಎ ಆಡಳಿತ ಅವಧಿಯಲ್ಲಿ ಇದು ಶೇ 60-70ರಷ್ಟಿತ್ತು. ಗುಜರಾತ್ ಮುಖ್ಯಮಂತ್ರಿ ದೇಶದ ಪ್ರಧಾನಿಯಾದ ಬಳಿಕ ಅದನ್ನು ಶೇಕಡಾ 25 ಕ್ಕೆ ಇಳಿಸಿದರು. ಈಗ ಮೋದಿ ದೆಹಲಿಯಲ್ಲಿ ನೆಲೆಸಿದ್ದಾರೆ, ಅದು 11 ಪ್ರತಿಶತವಾಗಿದೆ. 2016 ರಿಂದ ಸಂಸತ್ತಿನಲ್ಲಿ ಮೋದಿ ಎಷ್ಟು ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ? ಏನೂ ಇಲ್ಲ. ಸಂಸತ್ತಿಗೆ ನಿಮ್ಮದೇ ನಿಯಮಗಳನ್ನು ರೂಪಿಸಲು ನೀವು ಬಯಸುತ್ತೀರಿ. ವಿರೋಧ ಪಕ್ಷವು ಚರ್ಚೆಯನ್ನು ಬಯಸುತ್ತದೆ,'' ಎಂದು ಹೇಳಿದ್ದಾರೆ.

''ನಾನು ಭಾರತದ ಎಲ್ಲ ಯುವಕರು ತಿಳಿದುಕೊಳ್ಳಬೇಕೆಂದು ಬಯಸುತ್ತೇನೆ. ಮೋದಿ ಮಾಸ್ಟರ್‌ಸ್ಟ್ರೋಕ್: 12 ಮಸೂದೆಗಳನ್ನು, ಪ್ರತಿ ಮಸೂದೆಗೆ ಸರಾಸರಿ ಏಳು ನಿಮಿಷಗಳನ್ನು ಅಂಗೀಕರಿಸಲಾಗಿದೆ. ಈ ಗುಜರಾತ್ ಮಾದರಿ ಎಂದರೆ ದೆಹಲಿಯಲ್ಲಿ ಪ್ಯಾಪ್ರಿ ಚಾಟ್ ಮಾಡುತ್ತಿದ್ದಾರೆ. ಇದು ಗಂಭೀರ ಕಾನೂನು. ಎರಡೂ ಸದನಗಳಲ್ಲಿ ಬಿಜೆಪಿ ಬಹುಮತ ಹೊಂದಿದೆ. ನಾನು ಒಪ್ಪಿಕೊಳ್ಳುತ್ತೇನೆ. ಪ್ರತಿಪಕ್ಷಗಳು ತಮ್ಮ ಅಭಿಪ್ರಾಯವನ್ನು ಹೊಂದಿರಬೇಕು. ಸರ್ಕಾರವು ತನ್ನ ಮಾರ್ಗವನ್ನು ಹೊಂದಿರಬೇಕು. ಆದರೆ ಮೋದಿ ಮತ್ತು ಅಮಿತ್‌ ಶಾಗೆ ಅರ್ಥವಾಗುವುದಿಲ್ಲ,'' ಎಂದರು.

ಇನ್ನು ಕಾಂಗ್ರೆಸ್‌ನ ರಾಹುಲ್‌ ಗಾಂಧಿ ನಡೆಸಿದ ವಿರೋಧ ಪಕ್ಷಗಳ ಸಭೆಯಲ್ಲಿ ಸೇರಿರುವ ಟಿಎಂಸಿ ರಾಹುಲ್‌ ಕಾರ್ಯಸೂಚಿಯನ್ನು ಪಾಲಿಸಲುಯ ಸಿದ್ದವಿದೆಯೇ ಎಂದು ಮಾಧ್ಯಮ ಪ್ರಶ್ನಿಸಿದಾಗ ಅದಕ್ಕೆ ಪ್ರತಿಕ್ರಿಯಿಸಿದ ಟಿಎಂಸಿ ಮುಖಂಡ, ''ನಾವು ಇಂದು ಬೆಳಿಗ್ಗೆ ಸೈಕಲ್ ರ್ಯಾಲಿ ಕಲ್ಪನೆಯನ್ನು ಇಷ್ಟಪಟ್ಟಿದ್ದೇವೆ. 14-15 ವಿರೋಧ ಪಕ್ಷಗಳು ಭಾಗವಹಿಸಿದ್ದವು. ತುಂಬಾ ಚೆನ್ನಾಗಿದೆ. ಇದು ಹೊಗಳಬೇಕು ಎಂಬ ಕಾರಣಕ್ಕೆ ಹೇಳುವ ಮಾತುಗಳು ಅಲ್ಲ. ನಾವು ಇದನ್ನು ಜುಲೈ 19 ರಂದು ಮಾಡಿದ್ದೇವೆ. ಆದರೆ ವಿಷಯ ಇದಲ್ಲ ಈ ಎಲ್ಲ ಪ್ರಶ್ನೆಗಳನ್ನು ನೀವು ಯಾಕೆ ವಿರೋಧ ಪಕ್ಷದವರಿಗೆ ಕೇಳುತ್ತಿದ್ದೀರಿ? ನಾವು ಯಾಕೆ ಮೋದಿ ಮತ್ತು ಶಾಗೆ ಕಠಿಣ ಪ್ರಶ್ನೆಗಳನ್ನು ಕೇಳಬಾರದು? ಅವರಿಬ್ಬರು ಉದ್ಯೋಗಗಳು, ಆರ್ಥಿಕತೆ, ಚೀನಾ ಗಡಿ ಸಮಸ್ಯೆ ಬಗೆಹರಿಸುವ ಕುರಿತು ಮಾತನಾಡಿದ್ದಾರೆಯೇ?,'' ಎಂದು ಪ್ರಶ್ನಿಸಿದರು.

"ನಾವು ಪಶ್ಚಿಮ ಬಂಗಾಳದಲ್ಲಿ ಏಕೆ ಗೆದ್ದೆವು?. ಏಕೆಂದರೆ ಮಮತಾ ಬ್ಯಾನರ್ಜಿ ಕೇವಲ ಎರಡು ವಿಷಯಗಳನ್ನು ಹೇಳಿದರು. ದಯವಿಟ್ಟು ನನ್ನ 10 ವರ್ಷಗಳ ದಾಖಲೆಯನ್ನು ನೋಡಿ, ಇಲ್ಲಿಗೆ ಬರುವ ಪ್ರವಾಸಿ ತಂಡ ಮತ್ತು ಏಳು ವರ್ಷಗಳಲ್ಲಿ ಏನು ಮಾಡಿದ್ದಾರೆ ಎಂಬುದನ್ನು ನೋಡಿ ಎಂಬ ಎರಡು ವಿಚಾರಗಳನ್ನು ಮಮತಾ ದೀದಿ ಹೇಳಿದ್ದಾರೆ. ನಮ್ಮ ಉಪಹಾರದ ಬಗ್ಗೆ ನೀವು ಯಾಕೆ ಕೇಳುತ್ತಿದ್ದೀರಿ? ಅಂದಹಾಗೆ, ನಾನು ಈಗ ಪ್ಯಾಪ್ರಿ ಚಾಟ್ ಮಾಡುತ್ತಿದ್ದೇನೆ,'' ಎಂದು ಪ್ರಧಾನಿಯ ಪಕೋಡ ಹೇಳಿಕೆಯನ್ನು ಗೇಲಿ ಮಾಡಿದರು.

''ನಾನು ಕಾಣೆಯಾದ ವ್ಯಕ್ತಿಯ ಸೂಚನೆಯನ್ನು ನೀಡುತ್ತಿದ್ದೇನೆ. ನಾವು ಅದನ್ನು ಮಾಡಬೇಕು. ನಾವು ಜವಾಬ್ದಾರಿಯುತ ವಿರೋಧ ಪಕ್ಷವಾಗಿದ್ದರೆ, ನಾವು ಕಾಣೆಯಾದ ವ್ಯಕ್ತಿಯ ನೋಟಿಸ್ ಅನ್ನು ಸಲ್ಲಿಸಬೇಕು. ನಾನು ಸಂಸತ್ತಿನಲ್ಲಿ ಭಾರತದ ಗೃಹ ಸಚಿವರನ್ನು ನೋಡಿಲ್ಲ. ನಾನು ಭಾರತದ ಪ್ರಧಾನಿಯನ್ನು ಸಂಸತ್ತಿನಲ್ಲಿ ನೋಡಿಲ್ಲ. ಆದರೆ ನಾನು ಏನು ಮಾಡಬೇಕೆಂದು ನೀನು ನನಗೆ ಹೇಳುತ್ತೀರಿ?. ದೆಹಲಿ ಪೊಲೀಸ್ ಆಯುಕ್ತರನ್ನಾಗಿ ಮಾಡಲಾಗಿರುವ ಬಿಜೆಪಿಯ ಪ್ರೀತಿಯ ಅಧಿಕಾರಿ ಒಂಬತ್ತು ವರ್ಷದ ದಲಿತ ಹುಡುಗಿಯ ಮೇಲೆ ದೆಹಲಿಯಲ್ಲಿ ಸಾಮೂಹಿಕ ಅತ್ಯಾಚಾರ ಮಾಡಿಸಿದ್ದಾರೆ. ಗೃಹ ಸಚಿವರು ಬಂದು ಪ್ರಶ್ನೆಗಳಿಗೆ ಉತ್ತರಿಸಬೇಕಲ್ಲವೇ?,'' ಎಂದು ಕೇಳಿದ್ದಾರೆ.

''ಅಮಿತ್ ಶಾ ರಾಜ್ಯಸಭೆಗೆ ಅಥವಾ ಲೋಕಸಭೆಗೆ ಬಂದು ಈ ಒಂಬತ್ತು ವರ್ಷದ ದಲಿತ ಬಾಲಕಿ ದೆಹಲಿಯಲ್ಲಿ ಏಕೆ ಅತ್ಯಾಚಾರಕ್ಕೊಳಗಾದರು ಎಂದು ಹೇಳಿಕೆ ನೀಡಿದರೆ, ನಿಮ್ಮ ಕಾರ್ಯಕ್ರಮದಲ್ಲಿ ನಾನು ತಲೆ ಬೋಳಿಸಿಕೊಳ್ಳುತ್ತೇನೆ. ನಾನು ಅಮಿತ್ ಶಾಗೆ ಸವಾಲು ಹಾಕುತ್ತೇನೆ, ಏಕೆಂದರೆ ಆತ ಪೆಗಾಸಸ್ ನಿಂದ ಓಡಿಹೋಗುತ್ತಿದ್ದಾನೆ,'' ಎಂದಿದ್ದಾರೆ.