ಖುಷಿ ಸುದ್ದಿ..! ಶೇ.85.6ರಷ್ಟಾಗಿದೆ ಕೊರೊನಾ ಚೇತರಿಕೆ ದರ

ದೇಶದಲ್ಲಿ ಕೊರೊನಾ ಎರಡನೇ ಅಲೆ ದುರ್ಬಲಗೊಳ್ಳಲು ಪ್ರಾರಂಭಿಸಿದೆ. ದೇಶದಲ್ಲಿ ಕೋವಿಡ್ ಚೇತರಿಕೆ ದರ ಶೇಕಡಾ 85.6 ರಷ್ಟಿದೆ ಎಂದು ಆರೋಗ್ಯ ಸಚಿವಾಲಯ ಮಂಗಳವಾರ ಮಾಹಿತಿ ನೀಡಿದೆ. ಇದು ಮೇ 3 ರಂದು ಶೇಕಡಾ 81.7 ರಷ್ಟಿತ್ತು. ಕಳೆದ 24 ಗಂಟೆಗಳಲ್ಲಿ 4,22,436 ಮಂದಿ ಡಿಸ್ಜಾರ್ಜ್ ಆಗಿದ್ದಾರೆ. ಇದು ಇಲ್ಲಿಯವರೆಗಿನ ಅತಿದೊಡ್ಡ ಸಂಖ್ಯೆಯಾಗಿದೆ. ಇದು ಸಕಾರಾತ್ಮಕ ಬೆಳವಣಿಗೆಯಾಗಿದೆ ಎಂದು ಸಚಿವಾಲಯದ ಜಂಟಿ ಕಾರ್ಯದರ್ಶಿ ಲಾವ್ ಅಗರ್‌ವಾಲ್ ಹೇಳಿದ್ದಾರೆ. ಸಚಿವಾಲಯ ನೀಡಿದ ಮಾಹಿತಿ ಪ್ರಕಾರ ಕೇರಳದಲ್ಲಿ 99,651 ಮಂದಿ ಚೇತರಿಕೆ ಕಂಡಿದ್ದಾರೆ. 8 ರಾಜ್ಯಗಳಲ್ಲಿ ಮಾತ್ರ ಸೋಂಕಿತರ ಸಂಖ್ಯೆ ಹೆಚ್ಚಿದೆ. 26 ರಾಜ್ಯಗಳಲ್ಲಿ ಚೇತರಿಕೆ ಪ್ರಕರಣಗಳ ಸಂಖ್ಯೆ ಹೆಚ್ಚಿದೆ. ಮೇ 7 ರಂದು ದೇಶದಲ್ಲಿ ಸುಮಾರು 4,14,000 ಪ್ರಕರಣಗಳು ದಾಖಲಾಗಿತ್ತು. ಕಳೆದ 24 ಗಂಟೆಗಳಲ್ಲಿ 2,63,000 ಪ್ರಕರಣಗಳು ದಾಖಲಾಗಿವೆ. ಕಳೆದ 2 ದಿನಗಳಲ್ಲಿ 300,000ದಷ್ಟು ಹೊಸ ಪ್ರಕರಣ ಕಡಿಮೆಯಾಗಿದೆ. ಇಂದಿನ ಪ್ರಕರಣಗಳು ಮೇ 7 ರಂದು ಬಂದ ಪ್ರಕರಣಗಳಿಗಿಂತ ಶೇಕಡಾ 27ರಷ್ಟು ಕಡಿಮೆ. ದೇಶದ ಒಟ್ಟು ಜನಸಂಖ್ಯೆಯ ಶೇಕಡಾ 1.8 ರಷ್ಟು ಜನರು ಈವರೆಗೆ ಕೊರೊನಾ ಸೋಂಕಿನಿಂದ ಬಳಲುತ್ತಿದ್ದಾರೆ.

ಖುಷಿ ಸುದ್ದಿ..! ಶೇ.85.6ರಷ್ಟಾಗಿದೆ ಕೊರೊನಾ ಚೇತರಿಕೆ ದರ