Railway plantation

ಬೆಂಗಳೂರಿನ ಯಶವಂತಪುರ ರೈಲ್ವೆ ನಿಲ್ದಾಣದ ಬಳಿ ಇಂದು ಸಸ್ಯಗಳನ್ನು ನೆಡುವ ಬೃಹತ್ ಅಭಿಯಾನ ನಡೆಯಿತು. ರೈಲ್ವೆ ಸಿಬ್ಬಂದಿ ವಾಸಿಸುವ ಕಾಲೋನಿಯ ಬಳಿ ಈ ಹಿಂದೆ ಅನುಪಯುಕ್ತವಾಗಿ ತ್ಯಾಜ್ಯದಿಂದ ತುಂಬಿದ್ದ ಸ್ಥಳವನ್ನು ಸ್ವಚ್ಛಗೊಳಿಸಿ "ಆಜಾದಿ ಕಿ ಅಮೃತ್ ಮಹೋತ್ಸವ" ಹಾಗೂ "ಸ್ವಚ್ಛತಾ ಪಕವಾಡ"ದ ಅಂಗವಾಗಿ ನೈಋತ್ಯ ರೈಲ್ವೆ,ಬೆಂಗಳೂರು ವಿಭಾಗ, ಭಾರತದ ಪ್ರವಾಸೋದ್ಯಮ ಇಲಾಖೆ,ಬೆಂಗಳೂರು ಜಂಟಿಯಾಗಿ ಹಾಗೂ ಜಾಲಹಳ್ಳಿಯ ಸೆಂಟ್ ಕ್ಲಾರೆಟ್ ಕಾಲೇಜು ಸಹಯೋಗದೊಂದಿಗೆ ಈ ಬೃಹತ್‌ ಗಿಡ ನೆಡುವ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಮೊದಲಿಗೆ ನೈಋತ್ಯ ರೈಲ್ವೆ,ಬೆಂಗಳೂರು ಮಂಡಲ ಮುಖ್ಯಾಧಿಕಾರಿ ಶ್ಯಾಮ್ ಸಿಂಗ್ ಅವರು ಅಲ್ಲಿ ನೆರೆದಿದ್ದವರೆಲ್ಲರಿಗೂ ಸ್ವಚ್ಛ ಭಾರತ್ ಮಿಷನ್ ಅಂಗವಾಗಿ ಪ್ರತಿಜ್ಞಾವಿಧಿ ಭೋದಿಸಿದರು. ನಂತರ ಅವರು ಗಿಡ ನೆಡುವುದರ ಮೂಲಕ ಕಾರ್ಯಕ್ರಮ ಆರಂಭಿಸಿದರು. ನಂತರ ಅಪರ ಮಂಡಲ ಮುಖ್ಯಾಧಿಕಾರಿ ಕುಸುಮಾ ಹರಿಪ್ರಸಾದ್, ಭಾರತ ಪ್ರವಾಸೋದ್ಯಮ ಇಲಾಖೆ, ಬೆಂಗಳೂರು ವಿಭಾಗದ ನಿರ್ದೇಶಕ ಮೊಹಮದ್ ಫಾರುಕ್, ಸೆಂಟ್ ಕ್ಲಾರೆಟ್ ಕಾಲೇಜಿನ ಪ್ರಾಂಶುಪಾಲ ಡಾ. ಥಾಮಸ್ ವಿ. ತೆನ್ನಾಡಿಯಿಲ್  ಗಿಡ ನೆಟ್ಟು ನೀರೆರೆದರು. ನಂತರ ಕಾಲೇಜಿನ ಮಕ್ಕಳು ಗಿಡ ನೆಟ್ಟರು.
ಯಶವಂತಪುರ ರೈಲ್ವೆ ನಿಲ್ದಾಣದ ಬಳಿ ಇಂದು ಸಸ್ಯಗಳನ್ನು ನೆಡುವ ಬೃಹತ್ ಅಭಿಯಾನ