ಬಿ ಎಸ್.ಯಡಿಯೂರಪ್ಪಗೆ ವಯಸ್ಸಿನಿಂದ ಅರಳು ಮರುಳಾಗಿದೆ ಸಿದ್ದರಾಮಯ್ಯ ವಾಗ್ದಾಳಿ

ಚಿತ್ರದುರ್ಗ: ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪಗೆ ವಯಸ್ಸಿನಿಂದ ಅರಳು ಮರುಳಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಹಣ ತೆಗೆದುಕೊಳ್ಳುವುದನ್ನು ಫೋಟೋ ತೆಗೆದು ತೋರಿಸಬೇಕಾ?
ಕಾಂಗ್ರೆಸ್ ಆಡಳಿತದಲ್ಲಿ ಭ್ರಷ್ಟಾಚಾರ ನಡೆದಿದ್ದರೆ ತನಿಖೆ ನಡೆಸಲಿ. ನಮ್ಮ ಆಡಳಿತದ ಅವಧಿಯಲ್ಲಿ ಬಿಜೆಪಿಯವರು ಕಡ್ಲೆಪುರಿ ತಿಂತಿದ್ರಾ? ಎಂದು ಪ್ರಶ್ನಿಸಿದ್ದಾರೆ.ಸರ್ಕಾರ ಅಲ್ಪಾವಧಿಯಲ್ಲಿ ಟೆಂಡರ್ ನೀಡುತ್ತಿರುವ ಉದ್ದೇಶ ಏನು? ಹಣ ನೀಡಿದವರಿಗೆ ಮಾತ್ರ ಬಿಲ್ ಮಂಜೂರು ಮಾಡುತ್ತಿದ್ದಾರೆ ಎಂದರು.