ಕಾಂತಾರ-2 ಸಿದ್ಧತೆಯಲ್ಲಿ ರಿಷಭ್ ಪಂತ್: ಜೂನ್ ನಲ್ಲಿ ಚಿತ್ರೀಕರಣ ಆರಂಭ
ಕಾಂತಾರ ಚಿತ್ರದ ಭಾರೀ ಯಶಸ್ಸಿನ ನಂತರ ಇದೀಗ ರಿಷಭ್ ಪಂತ್ ಮತ್ತು ವಿಜಯ್ ಕಿರಂಗದೂರು ಜೋಡಿಯಲ್ಲಿ ಕಾಂತಾರಾ-2 ಚಿತ್ರ ಬರುವುದು ಖಚಿತವಾಗಿದ್ದು, ಜೂನ್ ನಲ್ಲಿ ಚಿತ್ರೀಕರಣ ಆರಂಭವಾಗಲಿದೆ.
ಕಾಂತಾರಾ ಚಿತ್ರ ನಿರೀಕ್ಷೆಗೂ ಮೀರಿ ಯಶಸ್ಸು ಕಂಡಿತ್ತು. ಕನ್ನಡದಲ್ಲಿ ಮೊದಲು ಬಿಡುಗಡೆ ಆದರೂ ಭಾರೀ ಬೇಡಿಕೆ ಹಿನ್ನೆಲೆಯಲ್ಲಿ ಹಿಂದಿ, ತೆಲುಗು, ತಮಿಳು ಸೇರಿದಂತೆ ನಾನಾ ಭಾಷೆಗಳಲ್ಲಿ ಬಿಡುಗಡೆ ಆಗಿ ಅಲ್ಲಿಯೂ ಭಾರೀ ಯಶಸ್ಸು ಕಂಡಿತ್ತು.
ಕಾಂತಾರಾ ಯಶಸ್ಸಿನ ಬೆನ್ನಲ್ಲೇ ಅದರ ಎರಡನೇ ಭಾಗ ನಿರ್ಮಿಸುವ ಬಗ್ಗೆ ಇತ್ತೀಚೆಗಷ್ಟೇ ಕೊರಗಜ್ಜ ಬಳಿ ರಿಷಭ್ ಶೆಟ್ಟಿ ದೈವದ ನುಡಿ ಕೇಳಿದ್ದರು. ಇದೀಗ ಕುಟುಂಬದ ಜೊತೆ ಫ್ಯಾಮಿಲಿ ಟೂರ್ ಮುಗಿಸಿದ ನಂತರ ರಿಷಭ್ ಶೆಟ್ಟಿ ಕಾಂತಾರಾ-2 ಚಿತ್ರಕಥೆ ಸಿದ್ಧತೆಯಲ್ಲಿ ತೊಡಗಿದ್ದಾರೆ.
ಹೊಂಬಾಳೆ ಫಿಲ್ಮ್ಸ್ ನಿರ್ಮಾಣದಲ್ಲಿ ಕಾಂತಾರಾ-2 ಚಿತ್ರ ಬಿಡುಗಡೆ ಆಗುವುದು ಕೊನೆಗೂ ದೃಢಪಟ್ಟಿದ್ದು, ರಿಷಭ್ ಶೆಟ್ಟಿ ಚಿತ್ರಕಥೆ ಅಂತಿಮಗೊಳಿಸುವ ಕಾರ್ಯದಲ್ಲಿ ತೊಡಗಿದ್ದು, ಜೂನ್ ನಲ್ಲಿ ಚಿತ್ರ ಸೆಟ್ಟೇರುವುದು ಖಚಿತವಾಗಿದೆ.