ಮಳವಳ್ಳಿ: ಪತ್ನಿಯನ್ನು ಕೊಂದು ಶವ ಹೂತಿಟ್ಟ ಪತಿ

ಮಳವಳ್ಳಿ: ತಾಲ್ಲೂಕಿನ ಕಲ್ಲುವೀರನಹಳ್ಳಿ ಗ್ರಾಮದಲ್ಲಿ ಶಕ್ರವಾರ ಪತಿಯೇ ತನ್ನ ಪತ್ನಿಯನ್ನು ಕೊಲೆ ಮಾಡಿ ಬೇರೆಯವರ ಜಮೀನಿನಲ್ಲಿ ಹೂತು ಹಾಕಿ ಪರಾರಿಯಾಗಿದ್ದಾನೆ.
ಕಲ್ಲುವೀರನಹಳ್ಳಿ ಗ್ರಾಮದ ರಾಣಿ (33) ಕೊಲೆಯಾದ ಮಹಿಳೆ. ಈಕೆಯ ಪತಿ ಶಿವರಾಜ್ (42) ಕೊಲೆ ಮಾಡಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ.
ಶುಕ್ರವಾರ ಸಂಜೆ ಕೊಲೆ ಮಾಡಿ ಶವವನ್ನು ಮನೆಯ ರೂಮಿನಲ್ಲಿ ಇಟ್ಟು ಮಧ್ಯರಾತ್ರಿ ವೇಳೆ ಪಕ್ಕದ ಸತೀಶ್ ಎಂಬುವವರ ಜಮೀನಿಗೆ ಶವವನ್ನು ಎಳೆದು ತಂದು ಹೊತು ಹಾಕಿದ್ದಾನೆ.
ಕೊಲೆ ಆರೋಪದಲ್ಲಿ ಜೈಲು ಸೇರಿದ್ದ ಶಿವರಾಜ್ 6 ತಿಂಗಳ ಹಿಂದಷ್ಟೇ ಬಿಡುಗಡೆಯಾಗಿದ್ದ. ಪತ್ನಿ ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ.
ಶನಿವಾರ ಬೆಳಿಗ್ಗೆ ಶಿವರಾಜು ಧರಿಸಿದ್ದ ಬಟ್ಟೆಗಳು ರಕ್ತಸಿಕ್ತವಾಗಿದ್ದವು ಎಂದು ಪಕ್ಕದಮನೆ ನಿವಾಸಿಗಳು ತಿಳಿಸಿದ್ದಾರೆ.
ಘಟನಾ ಸ್ಥಳಕ್ಕೆ ಸರ್ಕಲ್ ಇನ್ ಸ್ಪೆಕ್ಟರ್ ಡಿ.ಪಿ.ಧನರಾಜ್, ಸಬ್ ಇನ್‌ಸ್ಪೆಕ್ಟರ್ ಡಿ.ರವಿಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಶವ ಹೊರ ತೆಗೆದು ಮರಣೋತ್ತರ ಪರೀಕ್ಷಗೆ ಕಳುಹಿಸಿದ್ದಾರೆ. ಆರೋಪಿಯನ್ನು ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ಪೊಲೀಸರು ತಿಳಿಸಿದರು.