ಇನ್ಮೇಲೆ ಮತ್ತಷ್ಟು ದುಬಾರಿಯಾಗಲಿದೆ ಬ್ಯಾಂಕ್ ಸಾಲ
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಸಾಲದ ಮೇಲಿನ ಬಡ್ಡಿ ದರ ದುಬಾರಿಯಾಗಲಿದೆ. SBI ಮಾರ್ಜಿನಲ್ ಕಾಸ್ಟ್ ಆಫ್ ಫಂಡ್ಸ್ ಬೇಸ್ಡ್ ಲೆಂಡಿಂಗ್ ದರವನ್ನು 25 ಬೇಸಿಸ್ ಪಾಯಿಂಟ್ಗಳಷ್ಟು ಹೆಚ್ಚಿಸಿದೆ. ಇದರಿಂದ ಬ್ಯಾಂಕ್ನ ಕೋಟ್ಯಂತರ ಗ್ರಾಹಕರು ಆಘಾತಗೊಂಡಿದ್ದಾರೆ. ಇದಲ್ಲದೇ ಈಗಾಗಲೇ ಗೃಹ ಸಾಲ ಪಡೆದವರೂ ಹೆಚ್ಚಿನ ಬಡ್ಡಿ ಕಟ್ಟಬೇಕಾಗುತ್ತದೆ. ಈ ನಿರ್ಧಾರದಿಂದ ಹೊಸ & ಹಳೆಯ ಗ್ರಾಹಕರಿಬ್ಬರ ಮೇಲೂ ಪರಿಣಾಮ ಬೀರಲಿದೆ.