ಮನೋಹರ ಮೋರೆ ಪುತ್ರನ ಆರತಕ್ಷತೆಗೆ ಭೇಟಿ ನೀಡಿದ ಸಂಸದ ಪ್ರಹ್ಲಾದ ಜೋಶಿ

ಮನೋಹರ ಮೋರೆ  ಪುತ್ರನ ಆರತಕ್ಷತೆಗೆ ಭೇಟಿ ನೀಡಿದ ಸಂಸದ ಪ್ರಹ್ಲಾದ ಜೋಶಿ

ಧಾರವಾಡ : ಖ್ಯಾತ ಉದ್ದಿಮೆದಾರರು, ಧಾರವಾಡ ಮರಾಠ ವಿದ್ಯಾಪ್ರಸಾರಕ ಮಹಾ ಮಂಡಳಿಯ ಅಧ್ಯಕ್ಷರಾದ ಶ್ರೀ ಮನೋಹರ ಮೋರೆ ಅವರ ಪುತ್ರ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಸದಸ್ಯರಾದ ಡಾ. ಮಯೂರ ಮೋರೆಯವರ ಅರಕ್ಷತೆಯ ಕಾರ್ಯಕ್ರಮದ ನಿಮಿತ್ಯ ಮೋರೆ ಅವರ ನಿವಾಸಕ್ಕೆ ಕೇಂದ್ರ ಕಲ್ಲಿದ್ದಲು,

ಗಣಿ ಹಾಗೂ ಸಂಸದೀಯ ವ್ಯವಹಾರಗಳ ಸಚಿವರಾದ ಸನ್ಮಾನ್ಯ ಶ್ರೀ ಪ್ರಹ್ಲಾದ ಜೋಷಿ ಭೇಟಿ ನೀಡಿ ಶುಭಾಶಯಗಳನ್ನು ಕೋರಿದರು. ಈ ಸಂದರ್ಭದಲ್ಲಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಮಹಾಪೌರರಾದ ಶ್ರೀ ಈರೇಶ ಅಂಚಟಗೇರಿ, ಪಾಲಿಕೆಯ ಸದಸ್ಯರಾದ ಶ್ರೀ ಆನಂದ ಯಾವಗಲ್ , ಜಿಲ್ಲಾಧ್ಯಕ್ಷರಾದ ಶ್ರೀ ಸಂಜಯ ಕಪಟಕರ , ಹಾಗೂ ಮೋರೆ ಕುಟುಂಬಸ್ಥರು ಉಪಸ್ಥಿತರಿದ್ದರು.


9 ಲೈವ್ ನ್ಯೂಸ್ ಧಾರವಾಡ