1000 ಉದ್ಯೋಗಿಗಳ ವಜಾ ಮಾಡಿದ ಮೈಕ್ರೋಸಾಫ್ಟ್

1000 ಉದ್ಯೋಗಿಗಳ ವಜಾ ಮಾಡಿದ ಮೈಕ್ರೋಸಾಫ್ಟ್

ಬೆಂಗಳೂರು: ಖ್ಯಾತ ಟೆಕ್ ಕಂಪೆನಿ ಮೈಕ್ರೋಸಾಫ್ಟ್ 1000 ಉದ್ಯೋಗಿಗಳನ್ನು ವಜಾ ಮಾಡಿದೆ ಎಂದು ವರದಿಯಾಗಿದೆ.

ಎಕ್ಸ್ಟಾಕ್ಸ್, ಎಡ್ಜ್ ಸೇರಿದಂತೆ ಅನೇಕ ತಂಡಗಳಿಂದ ಜಗತ್ತಿನ ವಿವಧೆಡೆ ಕಾರ್ಯನಿರ್ವಹಿಸುತ್ತಿದ್ದ ಉದ್ಯೋಗಿಗಳನ್ನು ವಜಾ ಮಾಡಲಾಗಿದೆ.

ಇದರೊಂದಿಗೆ ಕಂಪೆನಿಯ ಒಟ್ಟು ಉದ್ಯೋಗಿಗಳ ಪೈಕಿ ಶೇ.1ರಷ್ಟು ಮಂದಿಯನ್ನು ವಜಾ ಮಾಡಿದಂತಾಗಿದೆ.

ಝಕರ್ ಬರ್ಗ್ ನೇತೃತ್ವದ ಮೆಟಾ ಕೂಡ ಸದ್ಯದಲ್ಲೇ ಭಾರೀ ಪ್ರವಾಣದಲ್ಲಿ ಉದ್ಯೋಗಿಗಳನ್ನು ವಜಾಗೊಳಿಸುವುದಾಗಿ ಹೇಳಿದೆ.

ಈ ಹಿಂದಿನ ವರದಿಗಳ ಪ್ರಕಾರ, ಮೈಕ್ರೋಸಾಫ್ಟ್‌ನಲ್ಲಿ 2,21,000 ಉದ್ಯೋಗಿಗಳು ಕಾರ್ಯನಿರ್ವಹಿಸುತ್ತಿದ್ದಾರೆ ಎನ್ನಲಾಗಿತ್ತು.

ಭಾರತದಲ್ಲಿಯೂ ಉದ್ಯೋಗ ಕಡಿತ ಮಾಡುವುದಾಗಿ ವಿಪ್ರೋ, ಇನ್ಛೋಸಿಸ್ ಮತ್ತಿತರ ಟೆಕ್ ಕಂಪೆನಿಗಳು ಘೋಷಿಸಿವೆ. ಅಲ್ಲದೆ ಹಲವು ಟೆಕ್ ಕಂಪೆನಗಳು ನೇಮಕಾತಿ ಪ್ರಕ್ರಿಯೆಯನ್ನು ವಿಳಂಬಗೊಳಿಸಿವೆ.

'ಕ್ರಂಚ್‌ಟೇಸ್'ನಲ್ಲಿ ಪ್ರಕಟವಾದ ವಿಶ್ಲೇಷಣೆಯೊಂದರ ಪ್ರಕಾರ ಅಮೆರಿಕದ ಟೆಕ್ ಕಂಪೆನಿಗಳು ಜುಲೈನಲ್ಲಿ 32,೦೦೦ ಉದ್ಯೋಗಿಗಳನ್ನು ವಜಾಗೊಳಿಸಿವೆ.