ಹಿಂದೂತ್ವ ಅನ್ನೋದು ಕೋಮುವಾದದ ಕಲ್ಪನೆ : ನಟ ಚೇತನ್​

ಹಿಂದೂತ್ವ ಅನ್ನೋದು ಕೋಮುವಾದದ ಕಲ್ಪನೆ : ನಟ ಚೇತನ್​

ಬೆಂಗಳೂರು : ವೇದಗಳು, ಶಾಸ್ತ್ರಗಳು ಆಗಿರಬಹುದು ಅದೆಲ್ಲವೂ 3 ಸಾವಿರ ವರ್ಷದಿಂದ ವೈದಿಕ ಪರಂಪರೆ ಬಂದಿದೆ ಎಂದು ನಟ ಚೇತನ್​ ಹೇಳಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂತಾರ ಸಿನಿಮಾ ಬಗ್ಗೆ ಹೆಮ್ಮ ಇದೆ. ಕರ್ನಾಟಕ ಸಂಸ್ಕೃತಿ ಬಗ್ಗೆ ಎತ್ತಿ ಹಿಡಿದಿದ್ದಾರೆ.

ರಿಷಬ್ ಶೆಟ್ಟಿ ಅವ್ರು ಭೂತಕೋಲ ಹಿಂದೂ ಸಂಪ್ರದಾಯ ಅಂತ ಹೇಳಿದ್ದಾರೆ. ಅದ್ರೆ ಪಂಬದ ಅನ್ನೋ ಪುಸ್ತಕ ಓದಿದ್ದೀನಿ. ಈ ಪಂಬದ ಆದಿವಾಸಿ ಪರಂಪರೆ. ಮೂಲವಾಸಿ ಪರಂಪರೆಯಿಂದ ಅಲ್ಲಿಂದ ಬಂದಿರೋದು. ಪಂಜುರ್ಲಿ, ಪುಡಿಚಾಮುಂಡಿ ಈ ವಿಚಾರಗಳು ನಮ್ಮ ಮೂಲವಾಸಿ ಸಂಸ್ಕೃತಿ. ಇದು ಹಿಂದೂ ಸಂಪ್ರದಾಯ ಅನ್ನೋದು ತಪ್ಪು. ವೇದಗಳು, ಶಾಸ್ತ್ರಗಳು ಆಗಿರಬಹುದು ಅದೆಲ್ಲವೂ 3 ಸಾವಿರ ವರ್ಷದಿಂದ ವೈದಿಕ ಪರಂಪರೆ ಬಂದಿದೆ ಎಂದರು.

ಇನ್ನು, ಹಿಂದೂ ಅನ್ನೋ ಪದ ಬರೋದು 6ನೇ ಶತಮಾನದಲ್ಲಿ ಹಿಂದೂತ್ವ ಅನ್ನೋದು ಕೋಮುವಾದದ ಕಲ್ಪನೆ. ಹಿಂದೂ ಧರ್ಮದ ಒಳಗೆ ಪರ್ವ, ಪಂಬದ , ನಲಿಕೆ, ಮೂಲನಿವಾಸಿ ಹಾಗು‌ ಬುಡಕಟ್ಟನ್ನ ಒಳಗಡೆ ತಗೋಂಡು ಹಿಂದೂ ಧರ್ಮ ಅಂತ ಹೇಳೋದು ಹೇಗೆ ಮಲೆ ಮಾದಪ್ಪ, ಜುಂಜಪ್ಪ ಇದು ಬಹುಜನ ಸಂಸ್ಕೃತಿ ಜಾರ್ಖಾಂಡ್​​ನಲ್ಲಿ‌ ಆದಿವಾಸಿ ಜನ ಬೇರೆ ಧರ್ಮ ಬೇಕು ಪ್ರತ್ಯೇಕ ಕಾಲಮ್ ಕೊಡಿ‌ ಅಂತ ಹೋರಾಟ ಮಾಡ್ತಿದ್ದಾರೆ. ಪ್ರತ್ಯೇಕ ಲಿಂಗಾಯಿತ ಧರ್ಮ ಕೊಡಿ ‌ಅಂತ ಹೋರಾಟ ಮಾಡಿದ್ದಾರೆ. ಅವೈದಿಕ ಪರಂಪರೆಯನ್ನ ಅರ್ಥ ಮಾಡಿಕೊಳ್ಳಬೇಕು ವೈದಿಕ ಪರಂಪರೆಯಲ್ಲ. ವರಾಹ ಅನ್ನೋದು ಸಂಸ್ಕೃತ ಪದ. ಅದು ವಿಷ್ಣುವಿನ ಅವತಾರ ಅದು ‌ಹಿಂದೂ ದೇವರು, ವರಹಾ ವಿಷ್ಣು ಅವತಾರ ಅಂತ ಹೇರಿದ್ದಾರೆ ಎಂದು ಹೇಳಿದರು.

ಅದಲ್ಲದೇ, ಭಾರತ ದೇಶ ಹಿಂದಿ ಹೇರಿಕೆಯನ್ನ ಒಪ್ಪಿಕೊಳ್ಳೋಕೆ ಆಗಲ್ವೋ, ಅದೇ ರೀತಿ‌ ಹಿಂದೂತ್ವವನ್ನ ಒಪ್ಪಿ ಕೋಳ್ಳೋಕೆ ಆಗಲ್ಲ. ಕೊರಗ ಸಮುದಾಯ ಮೂಲನಿವಾಸಿ ಸಮುದಾಯ, ಪ್ರಬಲ ಸಮುದಾಯ ಉಗುರು ಮತ್ತು ಕೂದಲು ಕಟ್ ಮಾಡಿ ಪ್ರಗ್ನೇಂಟ್ ಗೆ ಊಟ ತಿನ್ನಿಸುತ್ತಾರೆ. ಕೊರಗರನ್ನ ಇವತ್ತಿಗೂ ಅಸ್ಪೃಶ್ಯರಾಗಿ ತೋರಿಸುತ್ತಾನೆ. ಕಂಬಳವನ್ನ ನಡೆಸೋರು ಮೇಲೆ ಸಮುದಾಯದವರು ಆದನ್ನ ಓಡಿಸೋರು ಕೇಳ ವರ್ಗದ ಸಮುದಾಯರು ಎಂದರು.