ಪೋಷಕರು ಬೈದಿದ್ಕೆ ಮನೆ ಬಿಟ್ಟು ಹೋದ ಬಾಲಕಿ ಮೇಲೆ ರೈಲಿನಲ್ಲೇ ಅತ್ಯಾಚಾರ, ಕಾಮುಕ ಅರೆಸ್ಟ್
ಇಟಾವಾ: ಉತ್ತರ ಪ್ರದೇಶದ ಇಟಾವಾ ಜಿಲ್ಲೆಯಲ್ಲಿ ರೈಲಿನಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ರೈಲ್ವೆ ಸಿಬ್ಬಂದಿಯನ್ನು ಬಂಧಿಸಲಾಗಿದೆ.
ಪೋಷಕರು ಬೈದರೆಂದು ಮನನೊಂದು ಬಾಲಕಿ ತನ್ನ ಮನೆ ಬಿಟ್ಟು ಮಹೋಬಾ ಪ್ರದೇಶದಲ್ಲಿನ ತನ್ನ ಅಜ್ಜನ ಮನೆಗೆ ಹೋಗಲೆಂದು ಜನವರಿ 15 ರಂದು ರೈಲು ಹತ್ತಿದಳು.
ಮರುದಿನ ಬೆಳಿಗ್ಗೆ, ಬಾಲಕಿ ಇಟಾವಾ ರೈಲು ನಿಲ್ದಾಣದಲ್ಲಿ ಪ್ರಯಾಣಿಕರಲ್ಲಿ ಒಬ್ಬರಿಗೆ ತನ್ನ ಕುಟುಂಬ ಸದಸ್ಯರಿಗೆ ಕರೆ ಮಾಡಲು ಮತ್ತು ನನ್ನನ್ನು ಇಲ್ಲಿಂದ ಮನೆಗೆ ಹಿಂತಿರುಗಿಸುವಂತೆ ಕೇಳಿಕೊಂಡಳು. ಅಲ್ಲಿದ್ದವರು ಬಾಲಕಿಗೆ ಸಹಾಯ ಮಾಡಿದ್ದು, ಆಕೆಯ ಮನೆ ತಲುಪಿಸಿದ್ದಾರೆ.
ಮನೆಗೆ ಬಂದ ಬಾಲಕಿ ಅತ್ಯಾಚಾರದ ಘಟನೆಯ ಬಗ್ಗೆ ತಿಳಿಸಿದಳು. ಇದರಿಂದ ಆಘಾತಕ್ಕೊಳಗಾಅದ ಪೋಷಕರು ಇಟಾವಾ ರೈಲ್ವೆ ನಿಲ್ದಾಣಕ್ಕೆ ಹೋಗಿ ದೂರು ದಾಖಲಿಸಿದ್ದಾರೆ. ದೂರಿನ ಮೇರೆಗೆ ಸರ್ಕಾರಿ ರೈಲ್ವೆ ಪೊಲೀಸರು (ಜಿಆರ್‌ಪಿ) ಆರೋಪಿಯನ್ನು ಬಂಧಿಸಿದ್ದಾರೆ.
ಆರೋಪಿಯನ್ನು ರಾಜ್ ಕಪೂರ್ ಯಾದವ್ ಎಂದು ಗುರುತಿಸಲಾಗಿದೆ. ಈತ ಇಟಾವಾ ರೈಲ್ವೆಯ ಕ್ಯಾರೇಜ್ ಮತ್ತು ವ್ಯಾಗನ್ ವಿಭಾಗದಲ್ಲಿ ಪೌರ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದಾನೆ. ಆರೋಪಿಯು ಬಾಲಕಿಯ ಮೇಲೆ ಅತ್ಯಾಚಾರವೆಸಗಿರುವುದಾಗಿ ಒಪ್ಪಿಕೊಂಡಿದ್ದಾನೆ.