ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಸಂಸದ ಅಸಾದುದ್ದೀನ್ ಓವೈಸಿ ಸಂಬಂಧಿ

ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಸಂಸದ ಅಸಾದುದ್ದೀನ್ ಓವೈಸಿ ಸಂಬಂಧಿ

ಹೈದರಾಬಾದ್: ಎಐಎಂಐಎಂ ಮುಖ್ಯಸ್ಥ, ಸಂಸದ ಅಸಾದುದ್ದೀನ್ ಓವೈಸಿ ಅವರ ಸಂಬಂಧಿಯೊಬ್ಬರು ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸೋಮವಾರ (ಫೆ.27 ರಂದು) ನಡೆದಿದೆ.

ವೃತ್ತಿಯಲ್ಲಿ ಮೂಳೆ ತಜ್ಞನಾಗಿದ್ದ ಮಜರುದ್ದೀನ್ ಅಲಿ ಖಾನ್ ತಮ್ಮ ಗನ್‌ ನಲ್ಲಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮಜರುದ್ದೀನ್ ಓವೈಸಿ ಅವರ ಎರಡನೇ ಮಗಳ ಮಾವನಾಗಿದ್ದರು.

ಗುಂಡು ಹಾರಿಸಿಕೊಂಡ ಅವರನ್ನುಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಗಂಭೀರ ಸ್ಥಿತಿಯಲ್ಲಿದ್ದ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ.ಸೋಮವಾರ ಮಧ್ಯಾಹ್ನ 1 ಗಂಟೆಯ ವೇಳೆ ಮಜರುದ್ದೀನ್ ತಮ್ಮ ಲೈಸೆನ್ಸ್‌ ವುಳ್ಳ ಗನ್‌ ನಿಂದ ಗುಂಡು ಹಾರಿಸಿಕೊಂಡಿದ್ದಾರೆ. ಆಸ್ತಿ ವಿಚಾರವಾಗಿ ಕುಟುಂಬ ಸದಸ್ಯರು ಮತ್ತು ಮೃತರ ನಡುವೆ ಜಗಳ ನಡೆಯುತ್ತಿತ್ತು.ಈ ಹಿಂದೆ ಅವರ ವಿರುದ್ಧ ಕೌಟುಂಬಿಕ ದೌರ್ಜನ್ಯ ಪ್ರಕರಣವೂ ದಾಖಲಾಗಿತ್ತು. ಗನ್ ವಶಪಡಿಸಿಕೊಂಡಿದ್ದು, ಆತ್ಮಹತ್ಯೆಯ ಬಗ್ಗೆ ತನಿಖೆ ನಡೆಸುತ್ತಿದ್ದೇವೆ ಎಂದು ಹೈದರಾಬಾದ್ ಪಶ್ಚಿಮ ವಲಯ ಡಿಸಿಪಿ ಜೋಯಲ್ ಡೇವಿಸ್ ಹೇಳಿದ್ದಾರೆ.