ಧಾರವಾಡ ಜಿಲ್ಲೆಯ ಯಾದವಾಡ ಗ್ರಾಮದಲ್ಲಿ ಸಂಭ್ರಮದಿಂದ ಸ್ವಾತಂತ್ರ್ಯ ದಿನಾಚರಣೆ ಆಚರಣೆ ಮಾಡಲಾಯಿತು. | Dharwad |

ಸ್ವಾತಂತ್ರ್ಯ ದಿನಾಚರಣೆ ಸವಿನೆನಪಿಗಾಗಿ ಗ್ರಾಮದಲ್ಲಿ ಕಸ ವಿಲೇವಾರಿಮಾಡುವ ವಾಹನಕ್ಕೆ ಚಾಲನೆ ಕೊಡಲಾಯಿತು. ಸ್ವಚ್ಚಗ್ರಾಮ ಆದರ್ಶ ಗ್ರಾಮ ಎನ್ನುವ ಪರಿಕಲ್ಪನೆಯಲ್ಲಿ ಈ ವಾಹನ ಇಂದಿನಿಂದ ಊರಿನಲ್ಲಿ ಪ್ರತಿ ದಿನ ಕಸವಿಲೇವಾರಿ ಮಾಡಲಿದೆ. ಗ್ರಾಮ ಪಂಚಾಯತಿ ಅಧ್ಯಕ್ಷೆ ಪಾರ್ವತಿ ಗದಗಯ್ಯ ಹಿರೇಮಠ ಹಾಗೂ ಉಪಾಧ್ಯಕ್ಷೆ ಲಕ್ಷ್ಮಿ ಮಾಹಾಂತೇಶ ಗಳಗಿ ಸೇರಿದಂತೆ ಗ್ರಾಮ ಪಂಚಾಯತಿ ಸದಸ್ಯರಾದ ಶಿವಾನಂದ ಬೆಂಡಿಗೇರಿ, ಮಡಿವಾಳಪ್ಪ ದಿಂಡಲಕೊಪ್ಪ ಸೇರಿದಂತೆ ಇತರ ಸದಸ್ಯರು ಹಾಗೂ ಗ್ರಾಮದ ಚುನಾಯಿತ ಪ್ರತಿನಿಧಿಗಳು ಹಾಗೂ ಗ್ರಾಮಸ್ಥರು ಪಾಲ್ಗೊಂಡಿದ್ದರು.