ಕೊರೋನಾ ಸೇನಾನಿಗಳ ಜೀವಕ್ಕಿಲ್ಲ ಬೆಲೆ: ವ್ಯಾಕ್ಸಿನ್ ವೇಳೆ ಎಎನ್‍ಎಂಐ ಸಿಬ್ಬಂದಿ ಮೇಲೆ ಹಲ್ಲೆ
ವ್ಯಾಕ್ಸಿನ್ ವಿಷಯಕ್ಕೆ ಸಂಬಂಧಿಸಿದಂತೆ ವ್ಯಾಕ್ಸಿನ್ ಹಾಕುತ್ತಿದ್ದ ಎಎನ್‍ಎಂಐ ಸಿಬ್ಬಂದಿ ಮೇಲೆ ಮಹಿಳೆಯೊಬ್ಬಳು ಹಲ್ಲೆ ಮಾಡಿ ಗಾಯಗೊಳಿಸಿರುವ ಘಟನೆ ಹುಬ್ಬಳ್ಳಿಯ ನ್ಯೂ ಇಂಗ್ಲೀμï ಸ್ಕೂಲ್ ನಲ್ಲಿ ನಡೆದಿದೆ. ವ್ಯಾಕ್ಸಿನ್ ವಿಷಯಕ್ಕೆ ಸಂಬಂಧಿಸಿದಂತೆ ನಂದಿನಿ ಚುಂಚ ಮತ್ತು ಮಹಿಳೆ ನಡುವೆ ಮಾತಿನ ಚಕಮಕಿ ಕೂಡ ನಡೆಯಿತು. ಇನ್ನೂ ಸ್ಥಳಕ್ಕೆ ಕಸಬಾ ಪೆÇಲೀಸ್ ಠಾಣೆ ಸಿಬ್ಬಂದಿ ಹಾಗೂ ಜಿಲ್ಲಾ ಆರೋಗ್ಯಾಧಿಕಾರಿ ಯಶವಂತ ಮದಿನವರ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಅಲ್ಲದೇ ಸಾರ್ವಜನಿಕ ಸೇವೆಗೆ ನಿಂತಿರುವ ಸಿಬ್ಬಂದಿ ಮೇಲೆ ಸಾರ್ವಜನಿಕರೇ ಹಲ್ಲೆ ಮಾಡುವುದು ಎಷ್ಟರಮಟ್ಟಿಗೆ ಸರಿ ಎಂಬುವುದು ಯಕ್ಷ ಪ್ರಶ್ನೆಯಾಗಿದೆ.