ನದಿ ಪಾತ್ರದ ಜನರು ಎಚ್ಚರ ವಹಿಸುವಂತೆ ಅಧಿಕಾರಿಗಳ ಮನವಿ
ರಾಜ್ಯಾದ್ಯಂತ ಬಾರೀ ಮಳೆ ಹಿನ್ನಲೆ ತುಂಗಭದ್ರಾ ಜಲಾಶಯದ ಒಳ ಹರಿವು ಹೆಚ್ಚಳವಾಗಿದ್ದು, ಜಲಾಶಯದ ಅಪಾರ ಪ್ರಮಾಣ ನೀರನ್ನು ನದಿಗೆ ಬಿಡುಗಡೆ ಮಾಡಲಾಗಿದೆ. ಕೊಪ್ಪಳದ ಗಂಗಾವತಿ ಭಾಗದ ನದಿ ಪಾತ್ರದ ಜನರು ಎಚ್ಚರ ವಹಿಸುವಂತೆ ತಾಲೂಕು ಪಂಚಾಯತ್ ಇಒ ಡಾ.ಡಿ ಮೋಹನ್ ಹಾಗೂ ತಹಶೀಲ್ದಾರ್ ಅಧಿಕಾರಿಗಳು ಸೂಚನೆ ನೀಡಿದ್ದಾರೆ. ಇನ್ನು ಮೈಕ್, ತಮಟೆ ಮೂಲಕ ಸಿಬ್ಬಂದಿಗಳು. ಸಂದೇಶ ರವಾನಿಸುತ್ತಿದ್ದಾರೆ.