ಒಂದು ದಿನ ಕಾಯ್ದೆ ವಿರೋಧಿಸಿದ ಜನರೇ ಕಾಯ್ದೆ ಪರ ಮಾತನಾಡುವ ದಿನ ಬರುತ್ತೆ
ಪ್ರಜಾಪ್ರಭುತ್ವದಲ್ಲಿ ಒಂದು ಹೆಜ್ಜೆ ಹಿಂದೆ ಇಡೋದನ್ನ ನಾವು ಅಪಮಾನ ಅಂತ ಭಾವಿಸಲ್ಲ. ಮೋದಿ ಪ್ರಜಾಪ್ರಭುತ್ವವಾದಿ, ಸರ್ವಾಧಿಕಾರಿಯಾಗಿದ್ರೆ ಕಾಯ್ದೆ ಹಿಂತೆಗೆದುಕೊಳ್ತಿರ್ಲಿಲ್ಲ. ಒಂದು ದಿನ ಕಾಯ್ದೆ ವಿರೋಧಿಸಿದ ಜನರೇ ಕಾಯ್ದೆ ಪರ ಮಾತನಾಡುವ ದಿನ ಬರುತ್ತೆ ಎಂದು ಕೃಷಿ ಕಾಯ್ದೆ ಹಿಂಪಡೆದಿರುವುದಕ್ಕೆ ಚಿಕ್ಕಮಗಳೂರಲ್ಲಿ ಶಾಸಕ ಸಿ.ಟಿ.ರವಿ ಪ್ರತಿಕ್ರಿಯೆ ನೀಡಿದರು. ಕಾಂಗ್ರೆಸ್ ಸೇರಿ ರಾಜಕೀಯ ಪಕ್ಷಗಳೇ ಕೃಷಿ ಕಾಯ್ದೆ ತರಬೇಕು ಎಂದಿದ್ರು ಮಾರುಕಟ್ಟೆ ಮುಕ್ತ ಆಗಬೇಕು ಅಂತಿದ್ರು, ರಾಜಕೀಯ ಕಾರಣಕ್ಕೆ ವಿರೋಧಿಸಿದರು ಎಂದು ಆರೋಪಿಸಿದರು