ವರಿಷ್ಟರ ಆಶೀರ್ವಾದದ ನಿರೀಕ್ಷೆಯಲ್ಲಿ ಇಮ್ರಾನ್
ಅವಿಭಾಜ್ಯ ಧಾರವಾಡ ಜಿಲ್ಲೆಯ ಸ್ಥಳಿಯ ಸಂಸ್ಥೆಗಳಿಂದ ಪರಿಷತ ನ ಎರಡು ಸ್ಥಾನಗಳಿಗೆ ಡಿಸೆ0ಬರ್ 10 ಕ್ಕೆ ಚುನಾವಣೆ ನಡೆಯಲಿದೆ. ಈ ನಿಟ್ಟಿನಲ್ಲಿ ಕೈ ಪಾಳಯದಲ್ಲಿ ಆಕಾ0ಷಿಗಳ ಪಟ್ಟಿ ದಿನೆ ದಿನೆ ಬೆಳೆತಾಯಿದೆ. ಅದರಲ್ಲೂ ಈ ಬಾರಿ ಅಲ್ಪಸಂಖ್ಯಾತರಿಗೆ ಟಿಕೇಟ್ ನೀಡಬೇಕೆಂಬ ಚಿಂತನೆ ಹೈಕಮಾಂಡ ಮಟ್ಟದಲ್ಲಿ ನಡೆತಾಯಿದೆ. ಟಿಕೇಟ್ ನಿರೀಕ್ಷಿಸಿ ಮಾಜಿ ಸಚಿವ ಹಿಂಡಸಗೇರಿ, ಸಲೀಮ್ ಅಹ್ಮದ, ಇಸ್ಮಾಯಿಲ್ ತಮಟಗಾರ ಹಾಗೂ ಯುವ ಮುಖಂಡ ಇಮ್ರಾನ್ ಕಳ್ಳಿಮನಿ ಸೇರಿದಂತೆ ಅನೇಕರು ಅರ್ಜಿ ಸಲ್ಲಿಸಿದ್ದಾರೆ. ಆದರೆ ಈ ಪೈಕಿ ಹೈ ಕಮಾಂಡ್ ಕೃಪಾ ಕಟಾಕ್ಷ ಹೊಂದಿರುವ ಧಾರವಾಡದ ಇಮ್ರಾನ್ ಕಳ್ಳಿಮನಿ ಮುಂಚೂಣಿಯಲ್ಲಿದ್ದಾರೆ. ಇವರು ಇಮ್ರಾನ್ ಕಳ್ಳಿಮನಿ ಧಾರವಾಡ ಕಾಂಗ್ರೆಸ್ ನ ಕಟ್ಟಾ ಕುಟುಂಬದ ಕುಡಿ. ಮಾಜಿ ಸಚಿವ ವಿನಯ ಕುಲಕರ್ಣಿ ಗರಡಿಯಲ್ಲಿ ಪಳಗಿದ ಇವರು ವಿದ್ಯಾರ್ಥಿ ದೆಸೆಯಿಂದಲೂ ಸಾಮಾಜಿಕ ಹೋರಾಟಗಳಲ್ಲಿ ತೊಡಗಿಸಿಕೊಂಡು ಹಗಲು ರಾತ್ರಿಯೆನ್ನದೆ ಪಕ್ಷಕ್ಕಾಗಿ ಶ್ರಮಿಸಿದ್ದಾರೆ. ಇವರ ಅಜ್ಜ ಎಚ್. ಡಿ. ಕಳ್ಳಿಮನಿ ಅವಳಿನಗರದ ಪಾಲಿಕೆಯಲ್ಲಿ ಕಾಂಗ್ರೆಸ್ ನಿಂದ ಗೆದ್ದು 3 ಬಾರಿ ಮೇಯರ ಆಗಿದ್ದಾರೆ. ಇವರ ತಂದೆ ಮೊಹಮ್ಮದ ಶಫಿ ಕಳ್ಳಿಮನಿ 2 ದಶಕಗಳ ಕಾಲ ಧಾರವಾಡ ಜಿಲ್ಲೆಯ ಬ್ಲಾಕ ಕಾಂಗೇಸ್ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದಾರೆ. ಈ ಕುಟುಂಬದ ಪಕ್ಷ ನಿಷ್ಠೆ ಮೆಚ್ಚಿ ಸ್ವತಃ ಕಾಂಗ್ರೇಸ್ ಅಧಿನಾಯಕಿ ಸೋನಿಯಾ ಗಾಂಧಿ ದೆಹಲಿಗೆ ಕರೆಯಿಸಿಕೊಂಡು ಸನ್ಮಾಸಿದ್ದಾರೆ. ಈಗಾಗಲೇ ಪಕ್ಷದ ವಿವಿಧ ಹುದ್ದೆಗಳನ್ನು ಸಮರ್ಥವಾಗಿ ನಿರ್ವಹಿಸಿರುವ ಇವರು ಎಐಸಿಸಿ ನಾಯಕರ ಕೃಪಾ ಕಟಾಕ್ಷ ಹೊಂದಿದ್ದಾರೆ. ಇಮ್ರಾನ್ ಕಳ್ಳಿಮನಿಯವರ ಸಾಮಾಜಿಕ ಕಳಕಳಿ ಅಷ್ಟಿಷ್ಟಿಲ್ಲ. ತಮ್ಮದೇ ಆದ ಎಮ್ಸ್ ಪ್ರತಿಷ್ಟಾನದ ಮೂಲಕ ಕೋವಿಡ ಹಾಗೂ ಪ್ರವಾಹ ಸಂದರ್ಭದಲ್ಲಿ ಕಂಗೆಟ್ಟ ಅದೆಷ್ಟೋ ಕುಟುಂಬಗಳಿಗೆ ಆಸರೆಯಾಗಿ ನಿಂತಿದ್ದರು. ಬಡ ಜನರಿಗಾಗಿ ಆರೋಗ್ಯ ಮೇಳ, ಉದ್ಯೋಗ ಮೇಳ ಆಯೋಜಿಸುವ ಮೂಲಕ ದಲಿತರ, ಹಿಂದುಳಿದವರ, ಅಲ್ಪಸಂಖ್ಯಾತರ ಹಾಗೂ ಶೋಷಿತರ ಧ್ವನಿಯಾಗಿ ಕಾರ್ಯನಿರ್ವಾಹಿಸಿದ್ದಾರೆ. ಸದ್ಯ ರಾಜ್ಯ ಕಾಂಗೇಸ್ ಅಲ್ಪಸಂಖ್ಯಾತ ಘಟಕದ ಉಪಾಧ್ಯಕ್ಷ ರಾಗಿರುವ ಇವರು ವಿಧಾನಸೌದ್ ಮೆಟ್ಟಿಲೇರಲು ತಯಾರಿ ನಡೆಸಿದ್ದಾರೆ. ಸಿದ್ದರಾಮಯ್ಯ ಬಣ ಹಾಗೂ ಶಾಸಕ ಜಮೀರ್ ಅಹ್ಮದ ಖಾನ ಇಸ್ಮಾಯಿಲ್ ತಮಟಗಾರ ಪರ ಬ್ಯಾಟಿಂಗ ಬೀಸುತ್ತಿದ್ದಾರೆ. ಆದರೆ ಡಿಕೆಶಿ, ವಿನಯ ಕುಲಕರ್ಣಿ ಹಾಗೂ ಹೈ ಕಮಾಂಡ್ ಇಮ್ರಾನ್ ಕಳ್ಳಿಮನಿಗೆ ಟಿಕೆಟ್ ನೀಡಲು ಉತ್ಸುಕತೆ ಹೊಂದಿದೆ.