ಚೀನಾದಲ್ಲಿ ಕೊರೊನಾ ಉಲ್ಭಣ; ಪ್ರಧಾನಿ ನೇತೃತ್ವದಲ್ಲಿ ಇಂದು ಮಹತ್ವದ ಸಭೆ

ಚೀನಾದಲ್ಲಿ ಕೊರೊನಾ ಉಲ್ಭಣ; ಪ್ರಧಾನಿ ನೇತೃತ್ವದಲ್ಲಿ ಇಂದು ಮಹತ್ವದ ಸಭೆ

ನವದೆಹಲಿ: ಚೀನಾ ಸೇರಿ ದೇಶದಲ್ಲಿ ಕೊರೊನಾ ಮತ್ತೆ ಉಲ್ಭಣಿಸುತ್ತಿದ್ದಂತೆ ಎಚ್ಚೆತ್ತು ಕೊಂಡಿರುವ ಕೇಂದ್ರ ಸರ್ಕಾರ ನಿನ್ನೆ ಕೋವಿಡ್-19 ಪರಿಶೀಲನಾ ಸಭೆ ನಡೆಸಿತು. ಸಧ್ಯ ಪರಿಸ್ಥಿತಿಯನ್ನ ಪರಿಶೀಲಿಸಲು ಪ್ರಧಾನಿ ಮೋದಿ ಇಂದು ಮಧ್ಯಾಹ್ನ ಉನ್ನತ ಮಟ್ಟದ ಸಭೆ ನಡೆಸಲಿದ್ದಾರೆ. ಹಲವು ದೇಶಗಳಲ್ಲಿ ಕೊರೋನಾ ಉಲ್ಭಣಗೊಂಡಿರುವುದರಿಂದ ಮುಂಜಾಗ್ರತೆ ಕ್ರಮವಾಗಿ ಮೋದಿ, ಸಂಬಂಧಪಟ್ಟ ವಿಷಯಗಳ ಕುರಿತು ಚರ್ಚಿಸಲು ಇಂದು ಅಪರಾಹ್ನ ಉನ್ನತ ಮಟ್ಟದ ಸಭೆ ಕರೆದಿದ್ದಾರೆ ಎಂದು ಸುದ್ದಿಸಂಸ್ಥೆಗಳು ವರದಿ ಮಾಡಿವೆ.