ಬೆಂಗಳೂರು: ನಮ್ಮ ಯಾತ್ರಿ ಆಯಪ್ ಪ್ರಾರಂಭಿಸಿದ ಆಟೋ ಚಾಲಕರು

ಬೆಂಗಳೂರು: ಕ್ಯಾಬ್ ಅಗ್ರಿಗೇಟರ್ ಗಳನ್ನು ಎದುರಿಸಲು ಆಟೋ ಚಾಲಕರ ಸಂಘವು ನಮ್ಮ ಯಾತ್ರಿ ಆಯಪ್ ಅನ್ನು ಪ್ರಾರಂಭಿಸಿದೆ.
ಈ ಅಪ್ಲಿಕೇಶನ್ ನ ಹೈಲೈಟ್ ಎಂದರೆ ಸರ್ಕಾರ ನಿಗದಿಪಡಿಸಿದ ಶುಲ್ಕಗಳನ್ನು ಮಾತ್ರ ಸಂಗ್ರಹಿಸಲಾಗುತ್ತದೆ. ಪಿಕಪ್ ಶುಲ್ಕವಾಗಿ ರೂ.10 ಅನ್ನು ವಿಧಿಸಲಾಗುತ್ತದೆ.
ಯೂನಿಯನ್ ಕಾರ್ಯದರ್ಶಿ ರುದ್ರಮುತ್ತಿ ಅವರ ಪ್ರಕಾರ, ಈ ಅಪ್ಲಿಕೇಶನ್ ನವೆಂಬರ್ 1 ರಿಂದ ಸೇವೆಗೆ ಲಭ್ಯವಾಗಲಿದೆ.
"ಇಲ್ಲಿಯವರೆಗೆ 10,000 ಕ್ಕೂ ಹೆಚ್ಚು ಜನರು ಈ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿದ್ದಾರೆ. ಈ ಅಪ್ಲಿಕೇಶನ್ ಪ್ರಯಾಣಿಕರಿಗೆ ತಮ್ಮ ಆಯ್ಕೆಯ ಆಟೋವನ್ನು ತಮ್ಮ ಪಿಕ್ ಅಪ್ ಪಾಯಿಂಟ್ ಬಳಿ ಆಯ್ಕೆ ಮಾಡಲು ಅನುವು ಮಾಡಿಕೊಡುತ್ತದೆ. ಯಾವುದೇ ರದ್ದತಿ ಶುಲ್ಕವನ್ನು ವಿಧಿಸಲಾಗುವುದಿಲ್ಲ. ಚಾಲಕರ ವಿವರಗಳು ಮತ್ತು ಎಲ್ಲಾ ಸುರಕ್ಷತಾ ಕ್ರಮಗಳನ್ನು ಅನುಸರಿಸಲಾಗುವುದು" ಎಂದು ಅವರು ಹೇಳಿದರು.