ಬೆಂಗಳೂರಿನಲ್ಲಿ ಭರದಿಂದ ಸಾಗಿದ ಡಿಜಿಟಲ್ ಮೀಟರ್ ಅಳವಡಿಕೆ ಕಾರ್ಯ

ಬೆಂಗಳೂರು: ಬೆಂಗಳೂರಿನಲ್ಲಿ ಡಿಜಿಟಲ್ ಮೀಟರ್ ಅಳವಡಿಕೆ ಕಾರ್ಯ ಭರದಿಂದ ಸಾಗಿದ್ದು, ಇದುವರೆಗೆ 2,85,941 ಲಕ್ಷ ಡಿಜಿಟಲ್ ಮೀಟರ್‌ಗಳನ್ನು ಅಳವಡಿಸಲಾಗಿದೆ ಎಂದು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಮೀಟರ್ ಅಳವಡಿಕೆ ಕಾರ್ಯವನ್ನು ಎರಡು ಇಲೆಕ್ಟ್ರಿಕ್ ಕಂಪನಿಗಳಾದ ರಾಜೇಶ್ವರಿ ಇಲೆಕ್ಟ್ರಿಕಲ್ಸ್ ಮತ್ತು ವಿ.ಆರ್. ಪಾಟೀಲ್ ಇಲೆಕ್ಟ್ರಿಕಲ್ಸ್ ಕಂಪನಿಗಳಿಗೆ ಗುತ್ತಿಗೆ ನೀಡಲಾಗಿದೆ. ರಾಜಶ್ರೀ ಇಲೆಕ್ಟ್ರಿಕಲ್ಸ್ ದಿನಕ್ಕೆ ಸರಾಸರಿ 3,500 ರಿಂದ 3,800 ಡಿಜಿಟಲ್ ಮೀಟರ್ ಅಳವಡಿಸುತ್ತಿದೆ. ಹಾಗೆಯೇ ವಿ.ಆರ್. ಪಾಟೀಲ್ ಇಲೆಕ್ಟ್ರಿಕಲ್ಸ್ ಕಂಪನಿ ದಿನಕ್ಕೆ ಸರಾಸರಿ 2000 ರಿಂದ 5000 ಮೀಟರ್ ಗಳನ್ನು ಅಳವಡಿಸುತ್ತಿದೆ. ಇದೀಗ ಸಿಂಗಲ್ ಫೇಸ್ ಡಿಜಿಟಲ್ ಮೀಟರ್ ಅಳವಡಿಸಲಾಗುತ್ತಿದ್ದು, 3 ಫೇಸ್ ಮಿಟರ್ ಅಳವಡಿಕೆ ಕಾರ್ಯವನ್ನು ಇನ್ನಷ್ಟೇ ಕೈಗೆತ್ತಿಕೊಳ್ಳಬೇಕಾಗಿದೆ ಎಂದು ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಮಹಾಂತೇಶ ಬೀಳಗಿ ತಿಳಿಸಿದ್ದಾರೆ.