ಬಾಲಿವುಡ್ನ ಯಾವ ನಟನಿಂದಲೂ ಕಾಂತಾರ ಸಿನಿಮಾ ರಿಮೇಕ್ ಮಾಡಲು ಸಾಧ್ಯವಿಲ್ಲ ಎಂದ ರಿಷಭ್!

ಬೆಂಗಳೂರು: ವಿಮರ್ಶಕರಿಂದ ಮೆಚ್ಚುಗೆ ಪಡೆದ ಕಾಂತಾರ ಕಮರ್ಷಿಯಲ್ ಸಿನಿಮಾ ಆಗಿಯೂ ಯಶಸ್ಸು ಕಂಡಿದೆ. ಈಗ, ಯಾವ ಬಾಲಿವುಡ್ ನಟನಿಂದಲೂ ಶಿವನ ಪಾತ್ರ ಮಾಡಲು ಸಾದ್ಯವಿಲ್ಲ ಎಂದು ರಿಷಭ್ ಹೇಳಿದ್ದಾರೆ.
ಖಾಸಗಿ ಸಂದರ್ಶನ ಒಂದರಲ್ಲಿ ರಿಷಭ್ ಶೆಟ್ಟಿಗೆ 'ಕಾಂತಾರ ಸಿನಿಮಾವನ್ನು ಹಿಂದಿಯಲ್ಲಿ ರಿಮೇಕ್ ಮಾಡಿದರೆ ಯಾವ ಬಾಲಿವುಡ್ ನಟ ಶಿವನ ಪಾತ್ರವನ್ನು ನಿರ್ವಹಿಸಬಲ್ಲರು' ಎಂದು ಕೇಳಿದ್ದಾರೆ.
ಅದಕ್ಕೆ ಉತ್ತರಿಸಿದ ಶೆಟ್ರು 'ಬಹುಷಃ ಯಾರಿಂದಲೂ ಸಾಧ್ಯವಿಲ್ಲ. ನಾನು ಆ ಪಾತ್ರವನ್ನು ಇನ್ನೊಬ್ಬ ನಟನಿಗೆ ಹೇಗೆ ವಿವರಿಸುತ್ತೇನೋ ಗೊತ್ತಿಲ್ಲ. ನಾನು ಭೂತ ಕೋಲದ ಸೀಕ್ವೆನ್ಸ್ಗೆ ಭಾವನಾತ್ಮಕವಾಗಿ ಕನೆಕ್ಟ್ ಆಗಿದ್ದೇನೆ. ಅದರ ನಟನೆ ಭಾವನಾತ್ಮಕ ಹಾಗೂ ಆಧ್ಯಾತ್ಮಿಕ ಪ್ರಯಾಣ. ನಾವು ಭೂತ ಕೋಲವನ್ನು ಬಾಲ್ಯದಿಂದ ನೋಡುತ್ತಾ ಬೆಳೆದವರು. ನೀವು ದೈವದಲ್ಲಿ ನಂಬಿಕೆ ಇಡಬೇಕು' ಎಂದು ಹೇಳಿದರು.ಬಳಿಕ ಸ್ಪಷ್ಟನೆ ನೀಡಿದ ರಿಷಭ್, 'ಬಾಲಿವುಡ್ನಲ್ಲಿ ಒಳ್ಳೆಯ ನಟರಿಗೆ ಕೊರತೆ ಇಲ್ಲ. ಆದರೆ ನನ್ನಿಂದ ಶಿವನ ಪಾತ್ರವನ್ನು ಬಾಲಿವುಡ್ ನಟರು ನಿರ್ವಹಿಸುವುದನ್ನು ಊಹಿಸಲು ಸಾಧ್ಯವಿಲ್ಲ' ಎಂದು ಹೇಳಿದರು