ಮಳೆ ಹಿನ್ನೆಲೆ ಶಾಲೆ ಅಂಗನವಾಡಿಗಳಿಗೆ ರಜೆ

ಕೊಪ್ಪಳ ಜಿಲ್ಲೆಯಲ್ಲಿ ಬೆಳಿಗ್ಗೆಯಿಂದ ಸುರಿಯುತ್ತಿರುವ ನಿರಂತರ ಮಳೆ ಹಿನ್ನೆಲೆ ಇಂದು ಶಾಲೆ, ಅಂಗನವಾಡಿಗಳಿಗೆ ಜಿಲ್ಲಾಧಿಕಾರಿ ರಜೆ ಘೋಷಣೆ ಮಾಡಿದ್ದಾರೆ. ಇಂದಿನ ರಜೆಯ ಹಿನ್ನೆಲೆಯಲ್ಲಿ ಈ ದಿನದ ಬದಲಾಗಿ ಭಾನುವಾರ ಶಾಲೆ, ಅಂಗನವಾಡಿಗಳು ಇರಲಿವೆ ಎಂದು ತಿಳಿಸಿದ್ದಾರೆ.