ಅಮೆರಿಕ ದಾಳಿಗೆ ಪ್ರತಿದಾಳಿ: ಏರ್‌ಪೋರ್ಟ್ ಬಳಿ ಭಾರಿ ಬಾಂಬ್ ಸ್ಫೋಟ

ಅಮೆರಿಕ : ಅಮೆರಿಕದ ಡ್ರೋನ್ ದಾಳಿಗೆ ಪ್ರತಿಯಾಗಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬಳಿ ಭಾರಿ ಬಾಂಬ್ ಸ್ಫೋಟ ಸಂಭವಿಸಿದೆ.
ಸ್ಫೋಟಕ್ಕೆ ರಾಕೆಟ್ ದಾಳಿ ಕಾರಣವಾಗಿದೆ. ಕಾಬೂಲ್‌ನ ಸಲೀಮ್ ಕರ್ವಾನ್ ಪ್ರದೇಶದಲ್ಲಿ ಸ್ಫೋಟ ಸಂಭವಿಸಿದ್ದು, ಸ್ಫೋಟದ ಹೊಣೆಯನ್ನು ಯಾರೂ ಹೊತ್ತುಕೊಂಡಿಲ್ಲ.
ಸ್ಫೋಟದ ನಡುವೆಯೂ ಅಮೆರಿಕ ತನ್ನ ಸೈನಿಕರನ್ನು ಅಫ್ಘಾನ್ ನೆಲದಿಂದ ಸ್ಥಳಾಂತರಿಸುತ್ತಿದೆ. ಭಾನುವಾರ ಆತ್ಮಾಹತ್ಯಾ ಬಾಂಬರ್‌ಗಳು ಪ್ರಯಾಣಿಸುತ್ತಿದ್ದ ಕಾರ್ ಮೇಲೆ ಅಮೆರಿಕ ಡ್ರೋನ್ ದಾಳಿ ನಡೆಸಿ ಉಗ್ರರ ಸಂಚನ್ನು ವಿಫಲಗೊಳಿಸಿತ್ತು.